ಸಿಲ್ವಾಸ್ಸಾದಲ್ಲಿ ಚಳಿಗಾಲ, ಮಳೆಗಾಲ ಮತ್ತು ಬೇಸಿಗೆ ಕಾಲಗಳನ್ನು ಕಾಣಬಹುದು.
ಬೇಸಿಗೆ ಕಾಲವಾದ ಮಾರ್ಚ್ ಇಂದ ಮೇ, ಇಲ್ಲಿ ಅತಿ ಹೆಚ್ಚು ಧಗೆ ಇರುತ್ತದೆ, ಉಷ್ಣಾಂಶ 18 ರಿಂದ 39 ಡಿಗ್ರಿಯಷ್ಟಿರುತ್ತದೆ.
ಬೇಸಿಗೆಯ ಧಗೆಯಿಂದ ಸ್ವಲ್ಪ ಮುಕ್ತಿ ಕೊಡುವ ಮಳೆಗಾಲ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ.
ನವೆಂಬರ್ ನಿಂದ ಮಾರ್ಚ್ ಇಲ್ಲಿ ಚಲಿಗಾಲವಾಗಿದ್ದು ಸಿಲ್ವಾಸ್ಸಾವನ್ನು ಭೇಟಿ ನೀಡಲು ಇದು ಉತ್ತಮ ಕಾಲ. ಈ ಸಮಯದಲ್ಲಿ ಉಷ್ಣಾಂಶ 10 ಡಿಗ್ರಿ ಯಷ್ಟು ಇಳಿಯುತ್ತದೆ.