ಸಿಲಿಗುರಿಯ ಡೊಮ್ಯಾಸ್ಟಿಕ್ ವಿಮಾನ ನಿಲ್ದಾಣ ಬಾಗ್ದೊಗ್ರಾದಲ್ಲಿದ್ದು ಇದು ನಗರದಿಂದ 12 ಕಿಮೀ ದೂರದಲ್ಲಿದೆ. ಸಿಲಿಗುರಿಯು ದೆಹಲಿ, ಕೊಲ್ಕತ್ತಾ ಮತ್ತು ಮುಂಬೈಗಳೊಂದಿಗೆ ವಾಯು ಸಂಪರ್ಕವನ್ನು ಹೊಂದಿದೆ. ಗ್ಯಾಂಗ್ಟಾಕ್ನೊಂದಿಗೆ ಹೆಲಿಕ್ಯಾಪ್ಟರ್ ಸೌಲಭ್ಯವಿದೆ. 588ಕಿಮೀ ದೂರದಲ್ಲಿರುವ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಅಂತರ ರಾಷ್ಟ್ರೀಯ ವಿಮಾನ ಸೌಲಭ್ಯ ಪಡೆಯಬಹುದು. ಕೊಲ್ಕತ್ತಾ ಭಾರತದ ಎಲ್ಲ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.