ಶನಿ ಶಿಂಗ್ನಪುರ್ ದೇವಸ್ಥಾನವು ಶನಿಮಹಾತ್ಮನಿಗೆ ಸಮರ್ಪಿಸಲಾಗಿದ್ದು, ಶಿರಡಿಯಿಂದ ಸುಮಾರು 65 ಕಿಮೀ ದೂರದಲ್ಲಿದೆ. ಈ ದೇವಸ್ಥಾನವು ನೆಲೆಸಿರುವ ಹಳ್ಳಿಯಲ್ಲಿ ಕುತೂಹಲವೆಂದರೆ, ಅಲ್ಲಿನ ಮನೆಗಳಿಗೆ ಬಾಗಿಲುಗಳು ಇಲ್ಲದಿರುವುದು. ಶನೀಶ್ವರನು ತಮ್ಮನ್ನು ದರೋಡೆ ಮತ್ತು ಕಳ್ಳತನದ ಸೇರಿದಂತೆ, ಎಲ್ಲಾ ದುಷ್ಟಶಕ್ತಿಗಳಿಂದಲೂ ರಕ್ಷಿಸುವನು ಎಂಬ ನಂಬಿಕೆಯ ಪರಾಕಾಷ್ಟೆ ಇದಾಗಿದೆ. ಯಾವುದೇ ವ್ಯಕ್ತಿ ಕಳ್ಳತನವನ್ನು ಮಾಡಿದರೆ ಆತನು ಅದೇ ದಿನ ಕುರುಡನಾಗಿ ಶಿಕ್ಷೆ ಅನುಭವಿಸುವನು ಎಂಬುದು ಇಲ್ಲಿನ ಬಲವಾದ ನಂಬಿಕೆಯಾಗಿದೆ. ಶಿರಡಿಗೆ ಬರುವ ಅನೇಕ ಭಕ್ತರು ಶನಿ ದೇವರ ಈ ಆಸ್ಥಾನಕ್ಕೂ ಭೇಟಿ ನೀಡುತ್ತಾರೆ. ಈ ದೇವಾಲಯವು ಮುಂಜಾನೆ 5 ರಿಂದ ರಾತ್ರಿ 10 ಘಂಟೆಯವರೆಗೂ ಪೂಜೆಗಾಗಿ ತೆರೆದಿರುತ್ತದೆ.
ಶನಿ ಮಹಾತ್ಮನ ಮೂರ್ತಿಯು ಬೃಹತ್ತಾಗಿದ್ದು ಕಪ್ಪು ಶಿಲೆಯಿಂದ ಮಾಡಲ್ಪಟ್ಟಿದೆ. ಕೇವಲ ಪುರುಷ ಭಕ್ತರನ್ನು ಮಾತ್ರ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅನುಮತಿಸಲಾಗಿದೆ. ಭಕ್ತರು ಸಾರ್ವಜನಿಕ ಸ್ನಾನ ಗೃಹಗಳಲ್ಲಿ ಸ್ವಚ್ಛಗೊಂಡ ಬಳಿಕವಷ್ಟೇ ಯಾವುದೇ ಮೇಲಿನ ಉಡುಪುಗಳಿಲ್ಲದೆ ಪೂಜೆಯನ್ನು ಸಲ್ಲಿಸಬೇಕು.


Click it and Unblock the Notifications