Search
  • Follow NativePlanet
Share
ಮುಖಪುಟ » ಸ್ಥಳಗಳು » ಸೇವಾಗ್ರಾಮ » ಹವಾಮಾನ

ಸೇವಾಗ್ರಾಮ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Sevagram, India 37 ℃ Haze
ಗಾಳಿ: 17 from the NNW ತೇವಾಂಶ: 21% ಒತ್ತಡ: 1010 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 06 May 33 ℃ 92 ℉ 43 ℃109 ℉
Tuesday 07 May 34 ℃ 93 ℉ 44 ℃110 ℉
Wednesday 08 May 35 ℃ 95 ℉ 44 ℃112 ℉
Thursday 09 May 34 ℃ 94 ℉ 44 ℃112 ℉
Friday 10 May 35 ℃ 94 ℉ 43 ℃109 ℉

ಸೇವಾಗ್ರಾಮವು ವರ್ಷಪೂರ್ತಿ ಪ್ರಧಾನವಾಗಿ ಬಿಸಿಲು ಮತ್ತು ಒಣ ಹವೆಯಿಂದ ಕೂಡಿರುತ್ತದೆ. ಸೇವಾಗ್ರಾಮಕ್ಕೆ ಭೇಟಿಕೊಡಲು ಚಳಿಗಾಲವು ಉತ್ತಮ ಕಾಲವಾಗಿದೆ. ಅಲ್ಲದೆ ಮಳೆಗಾಲದ ನಂತರ ಕಾಲ ಅಂದರೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳು ಇಲ್ಲಿಗೆ ಭೇಟಿಕೊಡಲು ಇರುವ ಅತ್ಯುತ್ತಮ ಸಮಯವಾಗಿದೆ.

ಬೇಸಿಗೆಗಾಲ

ಸೇವಾಗ್ರಾಮದಲ್ಲಿ ಬೇಸಿಗೆಯು ತುಂಬ ಬಿಸಿಲಿನಿಂದ ಕೂಡಿರುತ್ತದೆ. ಮಾರ್ಚ್ ನಿಂದ ಜೂನ್ ವರೆಗೆ ಇರುವ ಬೇಸಿಗೆಯು ಇಲ್ಲಿನ ಉಷ್ಣಾಂಶವನ್ನು ಹಗಲಿನಲ್ಲಿ ಗರಿಷ್ಠ  42°ಸೆಲ್ಶಿಯಸ್ ವರೆಗೆ ಕೊಂಡೊಯ್ದರೆ, ಇರುಳಿನಲ್ಲಿ  28°ಸೆಲ್ಶಿಯಸ್ ವರೆಗೆ ಕುಸಿಯುವಂತೆ ಮಾಡುತ್ತದೆ. ಪ್ರವಾಸಿಗರು ಇಲ್ಲಿನ ಅಹಿತಕರ ವಾತಾವರಣದಿಂದಾಗಿ ಈ ಕಾಲದಲ್ಲಿ ಸೇವಾಗ್ರಾಮಕ್ಕೆ ಭೇಟಿಕೊಡುವ ಯೋಜನೆಯನ್ನು ಮುಂದೂಡುವುದು ಉತ್ತಮ.

ಮಳೆಗಾಲ

ಜೂನ್ ನಿಂದ ಸೆಪ್ಟಂಬರ್ ಅಂತ್ಯದವರೆಗೆ ಇರುವ ಮಳೆಗಾಲದ ಸಮಯವು ಸೇವಾಗ್ರಾಮಕ್ಕೆ ಭೇಟಿಕೊಡಲು ಉತ್ತಮವಾಗಿದೆ. ಈ ಕಾಲದಲ್ಲಿ ಸೇವಾಗ್ರಾಮವು ತನ್ನ ಸೌಂದರ್ಯದ ತುತ್ತತುದಿಯನ್ನು ತಲುಪಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಪ್ರಾಂತ್ಯವು ಅತ್ಯಲ್ಪ ಮಳೆಯನ್ನು ಕಾಣುವ ಪ್ರದೇಶವಾಗಿದ್ದು, ಈ ಕಾಲದಲ್ಲಿ ಯಾವುದೇ ತೊಂದರೆಗಳಿಂದ ಮುಕ್ತವಾಗಿರುತ್ತದೆ. ಇಲ್ಲಿನ ಉಷ್ಣಾಂಶವು ಬೇಸಿಗೆಯಷ್ಟು ಸುಡುವ ಬಿಸಿಲಿನಿಂದ ಕೂಡಿರುವುದಿಲ್ಲ. ಈ ಕಾಲದಲ್ಲಿ ಇಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ.

ಚಳಿಗಾಲ

ಸೇವಾಗ್ರಾಮದಲ್ಲಿ ಚಳಿಗಾಲವು ಅತ್ಯಂತ ಕಠೋರವಾದ ಚಳಿಯಿಂದ ಕೂಡಿರುತ್ತದೆ. ಇದು ನವೆಂಬರ್ ನಿಂದ ಫೆಬ್ರವರಿಯವರೆಗೆ ವ್ಯಾಪಿಸಿರುತ್ತದೆ. ಈ ಕಾಲದಲ್ಲಿ ಇಲ್ಲಿನ ಉಷ್ಣಾಂಶವು ಗರಿಷ್ಠ 28° ಸೆಲ್ಶಿಯಸ್ ಇದ್ದು, ಕನಿಷ್ಠ 15°ಸೆಲ್ಶಿಯಸ್ ಇರುತ್ತದೆ. ಈ ಕಾಲದಲ್ಲಿ ಇಲ್ಲಿನ ವಾತಾವರಣವು ತಂಪಾಗಿ ಹಿತವಾದ ಅನುಭವಕೊಡುವುದರಿಂದಾಗಿ, ಇಲ್ಲಿ ಕಳೆಯುವ ಪ್ರತಿ ಘಳಿಗೆಯು ಅವಿಸ್ಮರಣೀಯವನ್ನಾಗಿಸುತ್ತದೆ.