ಸೇವಾಗ್ರಾಮವು ನಾಗ್ಪುರ ನಗರಕ್ಕೆ ಸಮೀಪದಲ್ಲಿದೆ. ಹಾಗಾಗಿ ವಿಮಾನದಲ್ಲಿ ಸೇವಾಗ್ರಾಮಕ್ಕೆ ತಲುಪಲು ಬಯಸುವವರಿಗೆ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣವು ಅತ್ಯಂತ ಒಳ್ಳೆಯ ಸೌಲಭ್ಯವನ್ನು ಒದಗಿಸುತ್ತದೆ. ಇಲ್ಲಿಂದ ಭಾರತದ ಇತರ ನಗರಗಳಿಗು ಮತ್ತು ವಿದೇಶಕ್ಕು ನಿರಂತರವಾಗಿ ವಿಮಾನಗಳ ಹಾರಾಟದ ವ್ಯವಸ್ಥೆ ಇದೆ. ಅಲ್ಲದೆ ಹೈದರಾಬಾದ್, ಮುಂಬೈ, ಪುಣೆ ಮತ್ತು ದೆಹಲಿಗಳಿಂದ ನಾಗ್ಪುರಕ್ಕೆ ಪ್ರತಿದಿನ ವಿಮಾನ ಯಾನದ ಸೌಲಭ್ಯವಿದೆ. ವಿಮಾನಯಾನದ ಶುಲ್ಕವು 4,000 ದಿಂದ 7,000 ರೂಪಾಯಿಗಳವರೆಗೆ ಇರುತ್ತದೆ. ವಿಮಾನನಿಲ್ದಾಣದಿಂದ ಸೇವಾಗ್ರಾಮಕ್ಕೆ ತಲುಪಲು ಕಾರು ಮತ್ತು ಕ್ಯಾಬ್ ಗಳ ವ್ಯವಸ್ಥೆ ಇದೆ.