ಸವಾಯಿ ಮಾಧೊಪುರವು ಜೈಪುರದ ವಿಮಾನ ನಿಲ್ದಾಣದ ಮೂಲಕ ವಿಮಾನ ಸಂಪರ್ಕವನ್ನು ಪಡೆದಿದೆ. ಇದು ಇಲ್ಲಿಂದ 180 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಭಾರತದ ಇತರ ನಗರಗಳಿಂದ ನಿಯಮಿತವಾಗಿ ವಿಮಾನಗಳು ಹಾರಾಡುತ್ತಿರುತ್ತವೆ. ಅಲ್ಲದೆ ಈ ವಿಮಾನ ನಿಲ್ದಾಣಕ್ಕೆ ವಿಶ್ವದ ಪ್ರಮುಖ ಸ್ಥಳಗಳಿಂದ ಕೆಲವು ಅಂತಾರಾಷ್ಟ್ರೀಯ ವಿಮಾನಗಳು ಸಹ ಬಂದು ಹೋಗುತ್ತಿರುತ್ತವೆ. ಪ್ರವಾಸಿಗರು ಈ ನಿಲ್ದಾಣದಿಂದ ಸವಾಯಿ ಮಾಧೊಪುರಕ್ಕೆ ಟ್ಯಾಕ್ಸಿ ಅಥವಾ ಬಸ್ಸುಗಳ ಮೂಲಕ ತಲುಪಬಹುದು.