Search
  • Follow NativePlanet
Share
ಮುಖಪುಟ » ಸ್ಥಳಗಳು » ಸಂಗ್ರೂರ್ » ಹವಾಮಾನ

ಸಂಗ್ರೂರ್ ಹವಾಮಾನ

ಅಕ್ಟೋಬರ್ ನಿಂದ ಮಾರ್ಚ್ ನ ಅವಧಿ ಸಂಗ್ರೂರ್ ನ ಭೇಟಿಗೆ ಅತ್ಯುತ್ತಮವಾದ ಅವಧಿಯಾಗಿದೆ. ಈ ಅವಧಿಯಲ್ಲಿ ಹವಾಮಾನವು ಬಹಲ ಆಹ್ಲಾದಕರವಾಗಿರುತ್ತದೆ ಹೀಗಾಗಿ ಪ್ರವಾಸಿಗಳು ತಮ್ಮ ಭೇಟಿಯ ಸಂಪೂರ್ಣ ಲಾಭವನ್ನು ಪಡೆಯಬಹುದಾಗಿದೆ. ಇದೇ ಅವಧಿಯಲ್ಲಿ ಹಲವು ಜಾತ್ರೆಗಳನ್ನು ಆಯೋಜಿಸಲಾಗುತ್ತದೆ ಇದೂ ಬಹಳಷ್ಟು ಜನರನ್ನು ಆಕರ್ಷಿಸುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಜುಲೈ ಮಧ್ಯಭಾಗ): ಇಲ್ಲಿನ ಬೇಸಿಗೆ ಬಹಳ ಬಿಸಿ ಹಾಗೂ ಶುಷ್ಕ ವಾಗಿರುತ್ತದೆ. ಈ ಅವಧಿಯ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 48 ಹಾಗೂ 24 ಡಿಗ್ರಿ ಸೆಂಟಿಗ್ರೇಡ್ ಆಗಿರುತ್ತದೆ.

ಮಳೆಗಾಲ

(ಜುಲೈ ಮಧ್ಯಭಾಗದಿಂದ ಸೆಪ್ಟೆಂಬರ್): ಜುಲೈ ಮಧ್ಯಭಾಗದಲ್ಲಿ ಆರಂಭವಾಗುವ ಮಳೆಗಾಲ ಸೆಪ್ಟೆಂಬರ ತನಕ ಮುಂದುವರಿಯುತ್ತದೆ. ಇದರಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅನ್ನು ಒಳಗೊಂಡ ಉತ್ತರಾರ್ಧ ಮಳೆಗಾಲೋತ್ತರ ಅವಧಿ ಹಾಗೂ ಹವಾಮಾನ ಪರಿವರ್ತನೆಯ ಅವಧಿ ಎಂದು ಪರಿಗಣಿಸಲಾಗುತ್ತದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ): ಚಳಿಗಾಲವು ಬಹಳ ತಂಪಾಗಿರುತದೆ ಈ ಅವಧಿಯಲ್ಲಿ ತಾಪಮಾನ 7 ರಿಂದ 22 ಡಿಗ್ರಿ ಸೆಂಟಿಗ್ರೇಡ್ ತನಕ ಇರುತ್ತದೆ.