ಸಜನ್ ವರ್ಷದಲ್ಲಿ ಬಿಸಿ ಹಾಗೂ ತಂಪು ಎರಡೂ ವಾತಾವರಣವನ್ನು ಹೊಂದಿರುತ್ತದೆ. ಚಳಿಗಾಲದ ಸಂದರ್ಭ ಅಂದರೆ ಅಕ್ಟೋಬರ್‌ನಿಂದ ಫೆಬ್ರುವರಿ ಭೇಟಿಗೆ ಸಕಾಲ. ಈ ಸಂದರ್ಭದಲ್ಲಿ ಸಜನ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಅಪಾರ.
ಬೇಸಿಗೆ ಕಾಲವು ಇಲ್ಲಿ ಮಾರ್ಚ್ ತಿಂಗಳಲ್ಲಿ ಆರಂಭವಾಗುತ್ತದೆ. ಮೇ ತಿಂಗಳು ಅತ್ಯಂತ ಬಿಸಿಲು ಹಾಗೂ ಅಸಹನೀಯ ವಾತಾವರಣದಿಂದ ಕೂಡಿರುತ್ತದೆ. ಈ ಸಮಯದಲ್ಲಿ ಪ್ರವಾಸಿಗರು ಇತ್ತ ಬರದಿರುವುದೆ ಒಳಿತು. ಇಲ್ಲಿನ ತಾಪ ನಿಮ್ಮ ಪ್ರವಾಸದ ಮಜವನ್ನು ಕಿತ್ತುಕೊಳ್ಳಬಹುದು.
ಜೂನ್ ತಿಂಗಳಲ್ಲಿ ಮಳೆಗಾಲ ಆರಂಭವಾದರೆ ಸೆಪ್ಟೆಂಬರ್‌ನಲ್ಲಿ ಮುಗಿಯುತ್ತದೆ. ಈ ಸಂದರ್ಭದಲ್ಲಿ ಸಜನ್‌ನಲ್ಲಿ ಸಾಮಾನ್ಯ ವರ್ಷಧಾರೆ ಸುರಿಯುತ್ತದೆ ಅರ್ಥಾತ್ ಸಾಮಾನ್ಯ ಮಳೆಗಾಲ ಇಲ್ಲಿರುತ್ತದೆ. ಇಲ್ಲಿ ಹಿಂಗಾರು ಮಾರುತ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಗುತ್ತದೆ. ಈ ಸಂದರ್ಭದಲ್ಲಿ ಸಜನ್‌ಗೆ ಭೇಟಿ ನೀಡುವುದು ಉತ್ತಮ. ಆಗ ಎಲ್ಲಾ ಜಲಪಾತಗಳು ತುಂಬಿ ಹರಿಯುತ್ತಿರುತ್ತವೆ. ಹಸಿರು ಕಂಗೊಳಿಸುತ್ತಿರುತ್ತದೆ. ನದಿಗಳು ಉಕ್ಕಿ ಹರಿಯುತ್ತಿರುತ್ತವೆ. ನೋಡಲು ಪರಿಸರ ರಮಣೀಯವಾಗಿರುತ್ತದೆ.
ನವಂಬರ್‌ನಿಂದ ಫೆಬ್ರುವರಿ ನಡುವಿನ ಅವಧಿ ಇಲ್ಲಿ ಚಳಿಗಾಲ. ಈ ಸಂದರ್ಭದಲ್ಲಿ ವಾತಾವರಣ ಒಣದಾಗಿರುತ್ತದೆ. ತಂಪು ಗಾಳಿ ಬೀಸುತ್ತಿರುತ್ತದೆ. ವಾತಾವರಣದಲ್ಲಿ ತೇವಾಂಶವೂ ಕಡಿಮೆ ಇರುತ್ತದೆ.