ಭುಂತರ್ ವಿಮಾನ ನಿಲ್ದಾಣವು ರುಖಾಲಾಗೆ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಇಲ್ಲಿಂದ 41 ಕಿ.ಮೀ ದೂರದಲ್ಲಿದೆ. ಗಗ್ಗಲ್ ವಿಮಾನ ನಿಲ್ದಾಣವು ರುಖಾಲಾದಿಂದ ಸುಮಾರು 103 ಕಿ.ಮೀ ದೂರದಲ್ಲಿದೆ. ಇದು ಇಲ್ಲಿಗೆ ಬರಲು ಇರುವ ಬದಲಿ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣಗಳು ದೆಹಲಿ, ಮುಂಬೈ ಮತ್ತು ಧರ್ಮಶಾಲ ಹಾಗು ಇನ್ನಿತರ ನಗರಗಳೊಂದಿಗೆ ಉತ್ತಮ ವಿಮಾನ ಯಾನ ಸಂಪರ್ಕವನ್ನು ಹೊಂದಿದೆ. ಟ್ಯಾಕ್ಸಿ ಮತ್ತು ಕಾರುಗಳು ಈ ವಿಮಾನ ನಿಲ್ದಾಣದಿಂದ ರುಖಾಲಾಗೆ ತಲುಪಲು ಕೈಗೆಟುಕುವ ದರದಲ್ಲಿ ನಿಮಗೆ ದೊರೆಯುತ್ತವೆ.