ಸೇಬು ಮತ್ತು ಒಣ ದ್ರಾಕ್ಷಿಗಳ ತೋಟಗಳು ರುಖಾಲಾದ ಪ್ರಮುಖ ಆಕರ್ಷಣೆಯಾಗಿವೆ. ಇಲ್ಲಿ ಬೆಳೆಯಲಾಗುವ ರಾಯಲ್, ಗೋಲ್ಡನ್ ಮತ್ತು ಗ್ರ್ಯಾನಿ ಸ್ಮಿತ್ ಎಂಬ ಜಾತಿಗಳ ಸೇಬುಗಳ ತೋಟವು ಸಹ ಇಲ್ಲಿನ ಆಕರ್ಷಣೆಗಳಲ್ಲಿ ಸ್ಥಾನ ಪಡೆದಿವೆ. ಈ ಸೇಬುಗಳು ತಮ್ಮ ಬಣ್ಣ, ಸ್ವಾದ ಮತ್ತು ಸುಗಂಧದಿಂದಾಗಿ ವಿಶ್ವದೆಲ್ಲೆಡೆ ಖ್ಯಾತಿ ಪಡೆದಿವೆ. ಡಿಸೆಂಬರ್ ಮತ್ತು ಜನವರಿ ತಿಂಗಳುಗಳು ಇಲ್ಲಿಗೆ ಭೇಟಿ ಕೊಡಲು ಹೇಳಿ ಮಾಡಿಸಿದ ಸಮಯವಾಗಿದೆ. ಆಗ ಇಲ್ಲಿನ ತೋಟಗಳಲ್ಲಿ ಫಸಲು ಬಿಡುವ ಸಮಯವಾಗಿದ್ದು, ಪ್ರವಾಸಿಗರು ಅವುಗಳನ್ನು ನೋಡಿ ಆನಂದಿಸಬಹುದು.
ಇಲ್ಲಿನ ತೋಟಗಳಲ್ಲಿ, ಅಡ್ಡಾಡುತ್ತ, ಹಣ್ಣುಗಳು ಜೋತಾಡುವ ಮರಗಳ ನಡುವೆ ವಿಹಾರವನ್ನೂ ಸಹ ಮಾಡಬಹುದು. ಪ್ರವಾಸಿಗರು ಇಲ್ಲಿ ದೊರೆಯುವ " ಸಿಡ್ಕೂ" ಎಂಬ ಸ್ಥಳೀಯ ಖಾದ್ಯದ ರುಚಿಯನ್ನು ಸವಿಯಬಹುದು. ಇದನ್ನು ಗೋದಿಯ ಕೇಕ್‍ಗೆ ಅಫೀಮು ಬೀಜಗಳ ಪೇಸ್ಟ್ ಮತ್ತು ಇತರೆ ಮಸಾಲೆಗಳನ್ನು ಹಾಕಿ ತಯಾರಿಸಲಾಗುತ್ತದೆ.


Click it and Unblock the Notifications