Search
  • Follow NativePlanet
Share
ಮುಖಪುಟ » ಸ್ಥಳಗಳು » ರಿ ಭೋಯ್ » ಹವಾಮಾನ

ರಿ ಭೋಯ್ ಹವಾಮಾನ

ರಿಭೋಯ್ ಜಿಲ್ಲೆಯ ಪ್ರತಿಋತುವೂ ತನ್ನದೇ ಆದ ಮೋಡಿ ಮಾಡುವ ಲಕ್ಷಣಗಳನ್ನು ಹೊಂದಿದ್ದರೂ,ಅತ್ಯುತ್ತಮ ಭೇಟಿಯ ಅವಧಿ,ಬೇಸಿಗೆ. ಬೇಸಿಗೆಯ ಅವಧಿಯಲ್ಲಿ, ಸುಲಭವಾಗಿ ಸಂಚರಿಸಬಹುದಾದ ಶುಷ್ಕವಾತಾವರಣವಿರುತ್ತದೆ. ಇಲ್ಲಿನ ಶಾಖ ಕೆಲವು ಸಮಸ್ಯೆ ಉಂಟುಮಾಡಬಹುದಾದರೂ, ಅವುಗಳನ್ನು ಸರಿದೂಗಿಸಲು ಸಾಕಸ್ಟುಹಸಿರು ಜಿಲ್ಲೆಯನ್ನು ಆವರಿಸಿದೆ.

ಬೇಸಿಗೆಗಾಲ

ಜಿಲ್ಲೆಯಲ್ಲಿ ಬೇಸಿಗೆಯು ಮೇ, ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕಂಡುಬರುತ್ತದೆ. ರಿ ಭೋಯ್ ಜಿಲ್ಲೆಯ ಬೇಸಿಗೆ ಅಹಿತಕರ ಬಿಸಿಯನ್ನು ಪಡೆಯದೆ ಮಿತವಾಗಿರುತ್ತದೆ. ಸರಾಸರಿ ತಾಪಮಾನ,  ವಿಶೇಷವಾಗಿ ನೊಂಗ್ಪೋಹ್ ನಲ್ಲಿ 25 ರಿಂದ 30 ಡಿಗ್ರಿ. ಸೆ ನ ಆಸುಪಾಸಿನಲ್ಲಿರುತ್ತದೆ.  ಪ್ರತಿ ವರ್ಷ ಕಳೆಯುವಾಗ ತಾಪಮಾನ ಈ ಪ್ರದೇಶದಲ್ಲಿ ಹೆಚ್ಚುತ್ತಾ ಹೋಗುತ್ತಿದೆ.

ಮಳೆಗಾಲ

ರಾಜ್ಯದ ಇತರೆ ಭಾಗಗಳಂತೆ, ರಿ ಭೋಯ್ ಜಿಲ್ಲೆಯಲ್ಲಿ ಮುಂಗಾರಿನ ಧಾರಾಕಾರ ಮಳೆ ಸುರಿಯುತ್ತದೆ.  ಮಳೆಗಾಲವು ಜೂನ್ ಅಥವಾ ಜುಲೈ ಕೊನೆಯಲ್ಲಿ ಆರಂಭವಾಗಿ ಸೆಪ್ಟೆಂಬರ್ - ಅಕ್ಟೋಬರ್ ತನಕ ಮುಂದುವರಿಯುತ್ತದೆ. ಆದರೆ, ಮಳೆ ಗಣನೀಯವಾಗಿ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಅದರ ಪುರಾವೆಯಂತಿರುವ ಉಮಿಯಮ್ ಕೆರೆ ನೀರಿನ ಮಟ್ಟ ಕಡಿಮೆಯಾಗುವಿಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ತಪ್ಪಿಸುತ್ತದೆ.

ಚಳಿಗಾಲ

ರಿ ಭೋಯ್ ಜಿಲ್ಲೆಯಲ್ಲಿ ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳು ಚಳಿಗಾಲದ ತಿಂಗಳುಗಳು. ತಾಪಮಾನ ಗಣನೀಯವಾಗಿ  ಕಡಿಮೆಯಾಗಿ ಬಹಳ ತಂಪಿನ ವಾತಾವರಣ ಉಂಟಾಗುತ್ತದೆ. ಈ ಸಂದರ್ಭದಲ್ಲಿ ತಾಪಮಾನ ಸುಮಾರು 4 ಡಿಗ್ರಿ ಸೆಲ್ಷಿಯಸ್ ನಷ್ಟು ಕಡಿಮೆ  ದಾಖಲಾಗಬಹುದು. ಚಳಿಗಾಲದಲ್ಲಿ ಜಿಲ್ಲೆಯ ಕೆಲವು ದಿನಗಳ ಖಾಲ ರಿ ಭೋಯ್ ನಲ್ಲಿ ಉಳಿಯಲು ಯೋಜನೆ ಮಾಡಿದ್ದರೆ ಬೆಚ್ಚಗಿನ ಉಣ್ಣೆಯ ಬಟ್ಟೆಗಳನ್ನು ಧರಿಸಲೇಬೇಕು.