Search
  • Follow NativePlanet
Share
ಮುಖಪುಟ » ಸ್ಥಳಗಳು » ಪ್ರಾಚಿ ಕಣಿವೆ » ಹವಾಮಾನ

ಪ್ರಾಚಿ ಕಣಿವೆ ಹವಾಮಾನ

ಚಳಿಗಾಲದಲ್ಲಿ ಪ್ರಾಚಿ ಕಣಿವೆಗೆ ಭೇಟಿ ನೀಡುವುದು ಉತ್ತಮ. ವರ್ಷದ ಈ ಸಮಯದಲ್ಲಿ ತಂಪಾದ ವಾತಾವರಣವಿದ್ದು, ರಾತ್ರಿ ಹೊತ್ತಿನಲ್ಲಿ ಅತಿ ಚಳಿ ಇರುತ್ತದೆ. ಪ್ರವಾಸಿಗರು ಈ ಅವಧಿಯಲ್ಲಿ ಸ್ಥಳೀಯರು ಬೆಂಕಿಯ ಮುಂದೆ ಚಳಿ ಕಾಯಿಸುವುದನ್ನು ನೋಡಬಹುದಾಗಿದೆ. ಸೂಕ್ತವಾದ ವಾತಾವರಣ ಇರುವುದರಿಂದ ಈ ಅವಧಿಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಬೇಸಿಗೆಗಾಲ

ಬೇಸಿಗೆ ಇಲ್ಲಿ ಕಮ್ಮಿ ಅವಧಿಗೆ ಇರುತ್ತದೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಿಗೆಯ ಅವಧಿ ಇರುತ್ತದೆ. ಈ ಮೂರು ತಿಂಗಳ ಅವಧಿಯಲ್ಲಿ ಉಷ್ಣಾಂಶ ತೀವ್ರವಾಗಿ ಅಂದರೆ ನಲವತ್ತು ಡಿಗ್ರಿಯವರೆಗೆ ಸಾಗುತ್ತದೆ. ಬೇಸಿಗೆಯ ಅವಧಿಯುಲ್ಲಿ ಪ್ರಾಚಿ ಕಣಿವೆಗೆ ಭೇಟಿ ನೀಡುವುದು ಪ್ರಯಾಸದಾಯಕ, ಈ ಸಮಯದಲ್ಲಿ ಬಿಸಿಗಾಳಿಯಿಂದಾಗಿ ಬೆವರು ಸುರಿದು ಪ್ರಯಾಣ ತ್ರಾಸದಾಯಕವಾಗುತ್ತದೆ.

ಮಳೆಗಾಲ

ಮಳೆಗಾಲ ಇಲ್ಲಿ ಹೆಚ್ಚಿನ ಅವಧಿಗೆ ಇರುತ್ತದೆ. ಮಳೆಗಾಲ ಜೂನ್ ತಿಂಗಳಿನಿಂದ ಆರಂಭವಾಗಿ ಅಕ್ಟೋಬರ್ ತಿಂಗಳವರೆಗೆ ಸಾಗುತ್ತದೆ. ಬಿಟ್ಟು ಬಿಟ್ಟು ಈ ಅವಧಿಯಲ್ಲಿ ಮಳೆ ತೀವ್ರವಾಗಿ ಸುರಿಯುತ್ತದೆ. ಹೀಗಾಗಿ ಈ ಅವಧಿಯಲ್ಲಿ ಪ್ರಾಚಿ ಕಣಿವೆಗೆ ಭೇಟಿ ನೀಡುವುದು ಸೂಕ್ತವಲ್ಲ ಮತ್ತು ಈ ಅವಧಿಯಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಲೂ ಆಗುವುದಿಲ್ಲ.

ಚಳಿಗಾಲ

ಪ್ರಾಚಿ ಕಣಿವೆಯ ಭಾಗದಲ್ಲಿ ಚಳಿಗಾಲ ಚುಟುಕಾಗಿದ್ದು ಮೂರು ತಿಂಗಳು ಮಾತ್ರವಿರುತ್ತದೆ. ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳು ಮಾತ್ರ ಇಲ್ಲಿನ ಉಷ್ಣಾಂಶ ಹತ್ತು ಡಿಗ್ರಿಯವರೆಗೆ ಬೀಳುತ್ತದೆ. ಅತಿ ಹೆಚ್ಚಿನ ಉಷ್ಣಾಂಶ ವೆಂದರೆ 27 ಡಿಗ್ರಿ. ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ. ಪ್ರವಾಸಿಗರು ಈ ಸಮಯದಲ್ಲಿ ಭೇಟಿ ನೀಡುವಾಗ ಬೆಚ್ಚಗಿನ ಉಡುಗೆಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ.