Search
  • Follow NativePlanet
Share
ಮುಖಪುಟ » ಸ್ಥಳಗಳು» ಪ್ರಾಚಿ ಕಣಿವೆ

ಪ್ರಾಚಿ ಕಣಿವೆಯ ಪ್ರವಾಸೋದ್ಯಮ : ಸಂಸ್ಕ್ರುತಿ, ಪ್ರಾಚೀನ ಮತ್ತು ಪೌರಾಣಿಕತೆಯ ಸಮಾಗಮ

5

ಪ್ರಾಚಿ ಕಣಿವೆ ಭುವನೇಶ್ವರದಿಂದ 61 ಕಿಲೋಮೀಟರ್ ದೂರದಲ್ಲಿದೆ. ಪ್ರಾಚಿ ಕಣಿವೆಯ ಪ್ರವಾಸೋದ್ಯಮ ಹೆಸರುವಾಸಿ ಯಾಗಿರುವುದು ಇತಿಹಾಸದ ಮತ್ತು ಶ್ರೀಮಂತ ಪ್ರಾಚೀನಕತೆಯ ಬಗ್ಗೆ ಆಸಕ್ತಿ ಇರುವುವರಿಂದ. ಇದು ಪ್ರಾಚಿ ನದಿ ತಟದಲ್ಲಿದ್ದು ಇದು ಮಹಾನದಿಯ ಉಪನದಿ. ಕ್ರಿ.ಪೂ ಏಳನೇ ಶತಮಾನದಿಂದ ಹದಿನೈದನೇ ಶತಮಾನದವರೆಗಿನ  ಹಲವು ಸ್ಮಾರಕಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಾಹತಾ ಪ್ರಾಚಿ ಕಣಿವೆಯ ಪ್ರಮುಖ ವೈಜ್ಞಾನಿಕ ಪ್ರದೇಶವಾಗಿದ್ದು, ಪ್ರಾಚಿ ಮತ್ತು ಲಲಿತಾ ನದಿಯ ಸಮಾಗಮದಲ್ಲಿದೆ. ಇತಿಹಾಸದ ಪ್ರಕಾರ, ವಿಷ್ಣು ದೇವರು ಗಂಗೆಗೆ ಈ ನದಿಯಲ್ಲಿ ಸ್ನಾನ ಮಾಡಲು ಹೇಳುತ್ತಾನೆ. ಅದರಂತೆ ಇಲ್ಲಿ ವಿಷ್ಣುವಿನ ಪ್ರತಿಮೆಯನ್ನು ಕಾಣಬಹುದಾಗಿದ್ದು, ಇದನ್ನು ಲಲಿತಾ ಮಾಧವ ಎಂದು ಕರೆಯುತ್ತಾರೆ.

ಪ್ರಾಚಿ ಕಣಿವೆಯ ಸುತ್ತಮುತ್ತವಿರುವ ಪ್ರವಾಸಿ ಸ್ಥಳಗಳು

ಪ್ರಾಚಿ ಕಣಿವೆ ಹಲವು ಪುರಾತನ ದೇವಾಲಯಗಳ ತವರೂರು, ಇಲ್ಲಿನ ಕೆಲವು ದೇವಾಲಯಗಳು ರಾಮಾಯಣ ಮತ್ತು ಮಹಾಭಾರತದ ಕಥೆಯಲ್ಲಿ ಬರುತ್ತದೆ. ಶಿವನ ದೇವಾಲಯವಾದ ಅಮರೇಶ್ವರ ಮತ್ತು ರಾಮಾಯಣಕ್ಕೆ ಸಂಬಂಧವಿದೆ ಎನ್ನಲಾಗುತ್ತದೆ. ಪ್ರಾಚೀನ ದೇವಾಲಯವಲ್ಲದೇ ಶೋಭನೇಶ್ವರ ದೇವಾಲಯ, ಪಿದ್ ದೇವಾಲಯ, ಚಮುದಾ ದೇವಿ ದೇವಾಲಯ ಮತು ಗ್ರಾಮೇಶ್ವರ ದೇವಾಲಯ ಆಸುಪಾಸಿನಲ್ಲಿದೆ.

ಇದು ಮೂರು ನದಿಗಳ ಸಮಾಗಮ, ಪ್ರಾಚಿ, ಸರಸ್ವತಿ ಮತ್ತು ಮಣಿಕಾರ್ಣಿಕಾ ನದಿಗಳ ಸಂಗಮ. ಇದನ್ನು ಮಣಿಕಾರ್ಣಿಕಾ ತೀರ್ಥ ಎಂದೂ ಕರೆಯುತ್ತಾರೆ. ಇದು ದೇವಾಲಯಗಲ ಸಮೀಪದಲ್ಲೇ ಹರಿಯುತ್ತದೆ. ಸಾವಿರಾರು ಭಕ್ತಾದಿಗಲು ಈ ಸಂಗಮಕ್ಕೆ ಬಂದು ಪವಿತ್ರ ಸ್ನಾನ ಮಾಡುತ್ತಾರೆ ಹೆಚ್ಚಾಗಿ ಅಮವಾಸ್ಯೆಯ ಸಮದಲ್ಲಿ. ಪ್ರಾಚಿ ಕಣಿವೆಯ ಬೇರೆ ಬೇರೆ ದೇವರ ವಿವಿಧ ದೇವಾಲಗಳು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ.

ಪ್ರಾಚಿ ಕಣಿವೆಗೆ ಭೇಟಿ ನೀಡಲು ಯಾವ ಸಮಯ ಸೂಕ್ತ?

ಚಳಿಗಾಲದಲ್ಲಿ ಪ್ರಾಚಿ ಕಣಿವೆಗೆ ಭೇಟಿ ನೀಡುವುದು ಸೂಕ್ತ

ಪ್ರಾಚಿ ಕಣಿವೆ ತಲುಪುವುದು ಹೇಗೆ

ಪ್ರಾಚಿ ಕಣಿವೆ ತಲುಪಲು ವಿಮಾನ ಅಥವಾ ರೈಲಿನ ಮೂಲಕವಾದರೆ ಭುವನೇಶ್ವರ ಬಂದು ಇಲ್ಲಿಗೆ ತಲುಪಬಹುದು. ಅಲ್ಲಿಂದ ಟ್ಯಾಕ್ಸಿ ಅಥವಾ ಬಸ್ ಮೂಲಕ ಪ್ರಾಚಿ ಕಣಿವೆ ಭಾಗಕ್ಕೆ ತಲುಪಬಹುದು. ಪ್ರಾಚಿ ಕಣಿವೆ ಭೇಟಿ ನೀಡಲು ಚಳಿಗಾಲ ಅತ್ಯಂತ ಪ್ರಶಸ್ತ.

ಪ್ರಾಚಿ ಕಣಿವೆಯ ಹವಾಮಾನ

ಚಳಿಗಾಲದಲ್ಲಿ ಪ್ರಾಚಿ ಕಣಿವೆಗೆ ಭೇಟಿ ನೀಡುವುದು ಉತ್ತಮ. ವರ್ಷದ ಈ ಸಮಯದಲ್ಲಿ ತಂಪಾದ ವಾತಾವರಣವಿದ್ದು, ರಾತ್ರಿ ಹೊತ್ತಿನಲ್ಲಿ ಅತಿ ಚಳಿ ಇರುತ್ತದೆ. ಪ್ರವಾಸಿಗರು ಈ ಅವಧಿಯಲ್ಲಿ ಸ್ಥಳೀಯರು ಬೆಂಕಿಯ ಮುಂದೆ ಚಳಿ ಕಾಯಿಸುವುದನ್ನು ನೋಡಬಹುದಾಗಿದೆ. ಸೂಕ್ತವಾದ ವಾತಾವರಣ ಇರುವುದರಿಂದ ಈ ಅವಧಿಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಪ್ರಾಚಿ ಕಣಿವೆ ಪ್ರಸಿದ್ಧವಾಗಿದೆ

ಪ್ರಾಚಿ ಕಣಿವೆ ಹವಾಮಾನ

ಉತ್ತಮ ಸಮಯ ಪ್ರಾಚಿ ಕಣಿವೆ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪ್ರಾಚಿ ಕಣಿವೆ

  • ರಸ್ತೆಯ ಮೂಲಕ
    ಪ್ರಾಚಿ ಕಣಿವೆ ಒರಿಸ್ಸಾ ರಾಜ್ಯದ ಎಲ್ಲಾ ಪ್ರಮುಖ ನಗರಗಳ ಮೂಲಕ ತಲುಪಬಹುದು. ರಸ್ತೆಯ ಗುಣಮಟ್ಟವೂ ಚೆನ್ನಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಇಲ್ಲಿ ಹೇರಳವಾಗಿದೆ. ಈ ಪಟ್ಟಣವನ್ನು ಏಜೆನ್ಸಿಯ ಕ್ಯಾಬ್ ಮೂಲಕವೂ ತಲುಪ ಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪ್ರಾಚಿ ಕಣಿವೆಗೆ ಭುವನೇಶ್ವರ ಮತ್ತು ಪುರಿಯಿಂದ ಪ್ರಯಾಸವಿಲ್ಲದೇ ಪ್ರಯಾಣಿಸ ಬಹುದಾಗಿದೆ. ಈ ಎರಡೂ ನಗರವು ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಕ್ಯಾಬ್ ಮೂಲಕ ಅಥವಾ ಬಸ್ ಮೂಲಕ ಪ್ರಾಚಿ ಕಣಿವೆಗೆ ತಲುಪಬಹುದು. ಕ್ಯಾಬ್ ಬಾಡಿಗೆಗೆ ತೆಗೆದು ಕೊಳ್ಳುವ ಮೂಲಕ ಭುವನೇಶ್ವರದಿಂದ ಇಲ್ಲಿಗೆ ಸುಮಾರು 500 ರಿಂದ 600 ರೂಪಾಯಿಯ ನ್ಯಾಯಯುಕ್ತವಾದ ಬೆಲೆಯಿಂದ ತಲುಪಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಪ್ರಾಚಿ ಕಣಿವೆಗೆ ನೇರ ವಿಮಾನ ಸಂಪರ್ಕವಿಲ್ಲ. ಭುವನೇಶ್ವರದ ವಿಮಾನ ನಿಲ್ದಾಣ ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣ. ಇಲ್ಲಿಗೆ ಭೇಟಿ ನೀಡಲು ಬರುವ ಪ್ರವಾಸಿಗರು ಭುವನೇಶ್ವರ ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಕ್ಯಾಬ್ ಮೂಲಕ ಪ್ರಾಚಿ ಕಣಿವೆಗೆ ತಲುಪಬಹುದು. ಸರಕಾರದ ಮತ್ತು ಖಾಸಗಿ ಬಸ್ಸುಗಳು ಪ್ರಾಚಿ ಕಣಿವೆಗೆ ತಲುಪಲು ಲಭ್ಯವಿರುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat