ಧಾರ್ಮಿಕ ಕೇಂದ್ರವಾಗಿರುವುದುರಿಂದ ಪ್ರಭಾಸ್ ಗಿರಿ ಭಕ್ತಾದಿಗಳನ್ನು ವರ್ಷಾದ್ಯಂತ ಆಕರ್ಷಿಸುತ್ತದೆ. ಆದಾಗ್ಯೂ, ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಲು ಪ್ರಸಕ್ತ ಸಮಯ. ಯಾಕೆಂದರೆ ಈ ಅವಧಿಯಲ್ಲಿ ಆಹ್ಲಾದಕರವಾಗಿರುತ್ತದೆ.
ಬೇಸಿಗೆ ಕಾಲ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳವರೆಗಿದ್ದು, ಈ ಸಮಯದಲ್ಲಿ ತಾಪಾಂಶ ತೀವ್ರವಾಗಿರುತ್ತದೆ, ಬಿಸಿಲಿನ ತಾಪಮಾನ ನಲವತ್ತು ಡಿಗ್ರಿಯವರೆಗೂ ಸಾಗುತ್ತದೆ. ಒಟ್ಟಾರೆ ಇಲ್ಲಿ ಈ ಸಮಯದಲ್ಲಿ 25 ರಿಂದ 40 ಡಿಗ್ರಿಯವರೆಗಿರುತ್ತದೆ.
ಪ್ರಭಾಸ್ ಗಿರಿಯಲ್ಲಿ ಜುಲೈ ನಿಂದ ಸೆಪ್ಟಂಬರ್ ವರೆಗೆ ಮಳೆಗಾಲವಿರುತ್ತದೆ. ಈ ಸಮಯದಲ್ಲಿ ವಾತಾವರಣ ತೇವದಿಂದ ಕೂಡಿರುತ್ತದೆ.
ಚಳಿಗಾಲ ಇಲ್ಲಿ ಡಿಸೆಂಬರ್ ನಿಂದ ಫೆಬ್ರವರಿ ತಿಂಗಳಿನ ತನಕ ಇರುತ್ತದೆ. ಚಳಿಗಾಲದಲ್ಲಿ ತೀವ್ರ ಶೀತದ ವಾತಾವರಣವಿದ್ದು ಕೆಲವೊಮ್ಮೆ ಉಷ್ಣಾಂಶ ಹತ್ತು ಡಿಗ್ರಿಗಿಂತ ಕಮ್ಮಿಯೂ ತಲುಪುತ್ತದೆ. ಅತಿ ಹೆಚ್ಚಿನ ಉಷ್ಣಾಂಶವೆಂದರೆ 30 ಡಿಗ್ರಿಯವರೆಗಿದ್ದು ಆಹ್ಲಾದಕರ ವಾತಾವರಣ ವಿರುತ್ತದೆ.