ಮಳೆಗಾಲದಲ್ಲಿ ವಾತಾವರಣ ತಂಪಾಗಿರುವ ಕಾರಣ ಈ ಸಮಯದಲ್ಲಿಯೇ ಪೂವಾರ್ ಗೆ ಭೇಟಿ ನೀಡಿ. ನವೆಂಬರ್ ನಿಂದ ಫೇಬ್ರವರಿ ನಡುವಿನ ಚಳಿಗಾಲದಲ್ಲಿ ತಂಪಾದ ವಾತಾವರಣದಲ್ಲಿ ಮೋಜು ಮಸ್ತಿಗಾಗಿ ಪೂವಾರ್ ಗೆ ಬರಬಹುದು. ಬೇಸಿಗೆಯ ಕಾಲದಲ್ಲಿ ಕರಾವಳಿ ಪ್ರದೇಶ ಹೆಚ್ಚು ಉಷ್ಣತೆ ಮತ್ತು ಒಣಹವೆಯಿಂದ ಕೂಡಿರುವ ಕಾರಣಕ್ಕೆ ಬೇಸಿಗೆಯಲ್ಲಿ ಬರಬೇಡಿ. ಮಳೆಗಾಲದ ಭೇಟಿಯೂ ಕೊಂಚ ಕಷ್ಟಕರವೆನಿಸಬಹುದು.
ಪೂವಾರ್ ನಲ್ಲಿ ಬೇಸಿಗೆಯ ಸಮಯದಲ್ಲಿ ಅತಿಯಾದ ಸೆಕೆಯಿದ್ದು ಉಷ್ಣತೆ 37 ಡಿಗ್ರಿಯಷ್ಟು ತಲುಪುತ್ತದೆ. ಬೇಸಿಗೆಯ ಕಾಲ ಮಾರ್ಚ್ ನಿಂದ ಮೇ ತಿಂಗಳವರೆಗಿದ್ದು ಉಷ್ಣತೆ ಮತ್ತು ಶುಷ್ಕತೆ ಹೆಚ್ಚಿರುವ ಕಾರಣ ಇದು ಪೂವಾರ್ ಗೆ ಭೇಟಿ ನೀಡಲು ಉತ್ತಮವಾದ ಸಮಯವಲ್ಲ.
ಮಳೆಗಾಲ ಜೂನ್ ತಿಂಗಳಿನಿಂದ ಪ್ರಾರಂಭವಾಗಿ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಮಳೆ ಹನಿ ಸುರಿಯುತ್ತದೆ. ಮಳೆಯಿಂದಾಗಿ ವಾತಾವರಣ ತಂಪಾಗಿರುತ್ತದೆ. ಮಾನ್ಸೂನ್ ಸಮಯ ಪೂವಾರ್ ಗೆ ಭೇಟಿ ನೀಡಲು ಒಳ್ಳೆಯದು.
ನವೆಂಬರ್ ನಲ್ಲಿ ಶುರುವಾಗುವ ಚಳಿಗಾಲ ಫೇಬ್ರವರಿ ತಿಂಗಳವರೆಗೂ ಮೈ ನಡುಗುವಂತೆ ಮಾಡುತ್ತದೆ. ಈ ಸಂದರ್ಭದಲ್ಲಿ ಪೂವಾರ್ ನ ವಾತಾವರಣ ಮಧುರವಾಗಿರುತ್ತದೆ ಮತ್ತು ಸಾಧಾರಣವಾಗಿ ಉಷ್ಣತೆ 30 ಡಿಗ್ರಿಯಷ್ಟಿರುತ್ತದೆ.