ಪೊಚಂಪಳ್ಳಿಯನ್ನು ಭೇಟಿ ನೀಡಲು ಸೂಕ್ತವಾದ ಕಾಲವೆಂದರೆ ಉಷ್ಣತೆ ಕಡಿಮೆಯಿರುವ ಅಕ್ಟೋಬರ್ ನಿಂದ ಫೇಬ್ರವರಿ ತಿಂಗಳ ನಡುವಿನ ಕಾಲ. ಸಂಜೆಯ ವೇಳೆ ಸ್ವಲ್ಪ ಚಳಿಯಿರುವುದರಿಂದ ಜಾಕೇಟ್ ಅಥವಾ ಶಾಲ್ ತೆಗೆದುಕೊಂಡು ಪ್ರಯಾಣ ಹೊರಡುವುದು ಉತ್ತಮ.
ಪೊಚಂಪಳ್ಳಿ ಬೇಸಿಗೆ ಅತಿಯಾದ ಬಿಸಿಯಿಂದ ಕೂಡಿದ್ದು ಒಣ ಮತ್ತು ಶುಷ್ಕ ಹವೆಯಿಂದ ಕೂಡಿರುತ್ತದೆ. ಮಾರ್ಚ್ ನಿಂದ ಶುರುವಾಗುವ ಬೇಸಿಗೆ ಜೂನ್ ತಿಂಗಳ ಕೊನೆವರೆಗೂ ಇರುತ್ತದೆ. ಬೇಸಿಗೆಯಲ್ಲಿ 45 ಡಿಗ್ರಿಯವರೆಗೆ ಇಲ್ಲಿನ ಉಷ್ಣತೆ ತಲುಪುದರಿಂದ ಈ ಸಮಯದಲ್ಲಿ ಪೊಚಂಪಳ್ಳಿಯಿಂದ ದೂರವಿರುವುದೇ ಲೇಸು.
ಜುಲೈ ನಲ್ಲಿ ಪ್ರಾರಂಭವಾಗುವ ಮಾನ್ಸೂನ್ ಮಳೆ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲೂ ಮುಂದುವರೆಯುತ್ತದೆ. ಮಳೆಗಾಲದಲ್ಲಿ ಉಷ್ಣತೆ 35 ಡಿಗ್ರಿಗೆ ಕುಸಿದರೂ ಕೂಡ ಸುಡುವ ಸೂರ್ಯನಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಮಳೆಯ ರಭಸ ಸಾಧಾರಣದಿಂದ ಹೆಚ್ಚಿದ್ದು ವಾತಾವರಣದಲ್ಲಿ ತೇವಾಂಶವಿರುತ್ತದೆ.
ಡಿಸೆಂಬರ್, ಜನವರಿ ಮತ್ತು ಫೇಬ್ರವರಿಯಲ್ಲಿ ಕೊರೆಯುವ ಚಳಿಯಿರುತ್ತದೆ. ಜನವರಿಯಲ್ಲಿ ಅತಿಹೆಚ್ಚು ಚಳಿಯಿದ್ದು ಉಷ್ಣತೆ 25 ಡಿಗ್ರಿಗೆ ಕುಸಿಯುತ್ತದೆ. ಚಳಿಗಾಲ ಹಿತಕರವಾಗಿದ್ದು ಸುಡುವ ಸೂರ್ಯನ ಭಯವಿಲ್ಲದೇ ಬೆಳಗ್ಗೆ ಮತ್ತು ಸಂಜೆ ಹೊರಗಡೆ ಸುತ್ತಾಡಬಹುದು.