ಪಿಲಾನಿಗೆ ಭೇಟಿ ನೀಡಲು ಚಳಿಗಾಲವು ಸೂಕ್ತವಾಗಿದೆ. ಇಲ್ಲಿನ ಸುಡುವ ಶಾಖದಿಂದ ತಪ್ಪಿಸಿಕೊಳ್ಳಲು ಪ್ರವಾಸಿಗರು ಡಿಸೆಂಬರ್ ಮತ್ತು ಫೆಬ್ರುವರಿ ಮಧ್ಯದ ಅವಧಿಯಲ್ಲೇ ಇಲ್ಲಿಗೆ ಭೇಟಿ ನೀಡುವುದು ಒಳಿತು.
(ಎಪ್ರಿಲ್ ನಿಂದ ಜೂನ್): ಥಾರ್ ಮರಭೂಮಿಯ ಉಪಬಂಜರು ಪ್ರದೇಶಗಳಲ್ಲಿ, ಪಿಲ್ಲನಿಯು ಬರುವುದರಿಂದ, ಬೇಸಿಗೆಯಲ್ಲಿ ಅತಿಯಾದ ಉಷ್ಣತೆಯನ್ನು ಇದು ಹೊಂದಿರುತ್ತದೆ. ಮೇ ಮತ್ತು ಜುಲೈ ತಿಂಗಳುಗಳ ಮಧ್ಯದಲ್ಲಿ ಗರಿಷ್ಟ ತಾಪಮಾನವು 52° C ವರೆಗೂ ಹೋಗಿರುತ್ತದೆ.
(ಜುಲೈ ನಿಂದ ಸೆಪ್ಟಂಬರ್): ಅತಿ ಕಡಿಮೆ ಮಳೆ (ಕೇವಲ ಕೆಲವೇ ಮಿ.ಮೀ ಪ್ರತಿ ವರ್ಷ) ಪಡೆಯುವ ಈ ಪ್ರದೇಶವು ಕೆಲವು ವರ್ಷಗಳ ಕಾಲ ನಿರಂತರವಾಗಿ ಬರಪಿಡಿತವಾಗಿರುತ್ತದೆ.
(ನವಂಬರ್ ನಿಂದ ಫೆಬ್ರುವರಿ): ಮರಭೂಮಿಯ ವಾತಾವರಣ ಹೊಂದಿರುವ ಈ ಪ್ರದೇಶದಲ್ಲಿ, ಚಳಿಗಾಲವು ಕೂಡ ಸ್ವಲ್ಪ ಕಷ್ಟಕರವಾದದ್ದೇ ಆಗಿದೆ. ಡಿಸೆಂಬರ್ ಮತ್ತು ಜನವರಿ ಮಧ್ಯದ ಅವಧಿಯಲ್ಲಿ ಕನಿಷ್ಟ ತಾಪಮಾನವು 0° C ಕ್ಕಿಂತಲೂ ಕಡಿಮೆಯಿರುತ್ತದೆ.