ಬೇಸಿಗೆ ಇಲ್ಲಿಗೆ ಬರಲು ಸರಿಯಾದ ಕಾಲವಲ್ಲ. ವಿಪರೀತ ಸೆಖೆ ಇರುವುದರಿಂದ ಪ್ರವಾಸಿಗರಿಗೆ ಕಷ್ಟವಾಗಲಿದೆ. ಇದರಿಂದ ಚಳಿಗಾಲದಲ್ಲಿ ಬರುವುದು ಉತ್ತಮ. ರಜೆ ಕಳೆಯಲು ಇದು ಸೂಕ್ತ ಕಾಲ. ಪಲೋಡಿಗೆ ಬರುವ ಯೋಚನೆ ಇದ್ದರೆ ಚಳಿಗಾಲ ಆಯ್ಕೆ ಮಾಡಿಕೊಳ್ಳಿ. ವರ್ಷದ ಎಲ್ಲಾ ಅವಧಿಗಿಂತ ಇದು ಉತ್ತಮ.
(ಮಾಚ್‌ನಿಂದ ಜೂನ್): ಮಾರ್ಚ್ ತಿಂಗಳಿಂದ ಬೇಸಿಗೆ ಇಲ್ಲಿ ಆರಂಭವಾಗುತ್ತದೆ. ಜೂನ್‌ವರೆಗೂ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂದರೆ 45 ಡಿಗ್ರಿ ಸೆಲ್ಶಿಯಸ್ ಹಾಗೂ ಕಡಿಮೆ ಅಂದರೆ 32 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಇರುತ್ತದೆ.
(ಜುಲ್ಐನಿಂದ ಸೆಪ್ಟೆಂಬರ್) ಮಳೆಗಾಲ ಜುಲೈನಲ್ಲಿ ಆರಂಭವಾಗಿ ಸೆಪ್ಟೆಂಬರ್ ಕೊನೆಯವರೆಗೂ ಇರುತ್ತದೆ. ಅತಿ ಕಡಿಮೆ ಪ್ರಮಾಣದಲ್ಲಿ ಇಲ್ಲಿ ಮಳೆ ಆಗುತ್ತದೆ.
(ಅಕ್ಟೋಬರ್‌ನಿಂದ ಜನವರಿ) ಚಳಿಗಾಲ ಇಲ್ಲಿ ಅಕ್ಟೋಬರ್‌ನಲ್ಲಿ ಆರಂಭವಾಗಿ ಜನವರಿ ಕೊನೆಯವರೆಗೂ ಇರುತ್ತದೆ. ಈ ಸಂದರ್ಭದಲ್ಲಿ ವಾತಾವರಣದಲ್ಲಿ ಉಷ್ಣಾಂಶ ಗರಿಷ್ಠ 28 ಡಿಗ್ರಿ ಸೆಲ್ಶಿಯಸ್‌ನಿಂದ ಕನಿಷ್ಠ 5 ಡಿಗ್ರಿ ಸೆಲ್ಶಿಯಸ್‌ವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡುವವರು ಉಲ್ಲನ್ ಬಟ್ಟೆ ಜತೆಗೆ ತಂದುಕೊಳ್ಳುವುದು ಉತ್ತಮ.