ಹವಾಮಾನವು ಉತ್ತಮವಿರುವ ಬೇಸಿಗೆ ಮತ್ತು ವಸಂತ ಕಾಲಗಳು, ಪೆರೆನ್ ಅನ್ನು ಸಂದರ್ಶಿಸಲು ಅತಿ ಸೂಕ್ತ ಕಾಲಗಳು. ವಸಂತ ಕಾಲದಲ್ಲಂತೂ ನೀವು ಈ ಜಿಲ್ಲೆಯ ಅತ್ಯುತ್ತಮ ಪ್ರಕೃತಿ ಸೌoದರ್ಯವನ್ನು ಸವಿಯಬಹುದು. ಅಕ್ಟೋಬರ್ ತಿಂಗಳ ಅವಧಿಯಲ್ಲಿ ನೀವು ಭೇಟಿ ನೀಡಿದ್ದಾದರೆ, ಚಾಗಾ-ಜೀ ಮತ್ತು ಚೆಗಾ ಗಾಡಿ ಹಬ್ಬಗಳ ಸವಿಯನ್ನು ನೀವು ಸವಿಯಬಹುದು.
ಮಾರ್ಚ್ ನಿಂದ ಮೇ ತಿಂಗಳವರೆಗಿನ ಅವಧಿಯು ಪೆರೆನ್ ನಲ್ಲಿ ಬೇಸಿಗೆ ಕಾಲವಾಗಿದ್ದು, ಇದು ವರ್ಷದ ಅತ್ಯುತ್ತಮ ಕಾಲಾವಧಿಯಾಗಿದೆ. ಈ ದಿನಗಳಲ್ಲಿ ಉಷ್ಣತೆಯು 18 ಡಿಗ್ರಿ ಸೆಲ್ಷಿಯಸ್ ನಿಂದ 25 ಡಿಗ್ರಿ ಸೆಲ್ಷಿಯಸ್ ನವರೆಗೆ ವ್ಯಾಪಕಗೊಳ್ಳುತ್ತದೆ. ಈ ಕಾಲಾವಧಿಯಲ್ಲಿ ಒಮ್ಮೊಮ್ಮೆ ಮಳೆಯೂ ಬೀಳುವುದರ ಮೂಲಕ ಈ ಪ್ರದೇಶದ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಜೂನ್ ತಿಂಗಳಿನಿಂದ ಅಕ್ಟೋಬರ್ ತಿಂಗಳ ಅವಧಿಯವರೆಗೆ ಪೆರೆನ್ ಜಿಲ್ಲೆಯು ನಾಗಲ್ಯಾಂಡ್ ರಾಜ್ಯದ ಹೆಚ್ಚಿನ ಇತರ ಭಾಗಗಳಂತೆ ಸಾಕಷ್ಟು ಮಳೆಯನ್ನು ಹೊಂದುತ್ತದೆ. ಇಲ್ಲಿ ಆಗಾಗ್ಗೆ ಆಲಿಕಲ್ಲು ಮಳೆಯೂ ಸಹ ಉಂಟಾಗುತ್ತದೆ. ವರ್ಷದ ಈ ಅವಧಿಯಲ್ಲಿ ಗಿರಿಶಿಖರಗಳು ಮತ್ತು ಅರಣ್ಯಗಳು ಅವುಗಳ ಉಚ್ಛ್ರಾಯ ಸ್ಥಿತಿಯಲ್ಲಿದ್ದು, ಹೆಚ್ಚಿನ ಮರ, ಗಿಡಗಳು ಹೂ, ಹಣ್ಣುಗಳನ್ನು ಹೊಂದಲು ಆರಂಭಿಸುತ್ತವೆ.
ಪೆರೆನ್ ನಲ್ಲಿ ಚಳಿಗಾಲವು ನವೆಂಬರ್ ತಿಂಗಳಿನಿಂದ ಆರಂಭಗೊಂಡು, ಫೆಬ್ರವರಿಯ ಅಂತ್ಯದವರೆಗೂ ಮುಂದುವರೆಯುತ್ತದೆ. ಪರ್ವತಮಯ ಪ್ರದೇಶವಾದ್ದರಿಂದ, ವರ್ಷದ ಈ ಅವಧಿಯಲ್ಲಿ, ಈ ಪ್ರದೇಶವು ಅತಿ ಭೀಷಣ ಚಳಿಯನ್ನು ಅನುಭವಿಸುತ್ತದೆ. ಈ ಅವಧಿಯಲ್ಲಿ ತಾಪಮಾನವು 5 ಡಿಗ್ರಿ ಸೆಲ್ಷಿಯಸ್ ಗಿಂತಲೂ ಕಡಿಮೆಯಾಗಿ ಈ ಸ್ಥಿತಿಯು ಒಂದು ಬಾರಿಗೆ ಹಲವು ದಿನಗಳವರೆಗೆ ಮುಂದುವರೆಯುತ್ತದೆ.