Search
  • Follow NativePlanet
Share
ಮುಖಪುಟ » ಸ್ಥಳಗಳು » ಪನ್ಹಾಲಾ » ಹವಾಮಾನ

ಪನ್ಹಾಲಾ ಹವಾಮಾನ

ಪನ್ಹಾಲಾ ಪಟ್ಟಣವು ಒಂದು ಅತಿಥೇಯ ವಾಯುಗುಣವನ್ನು ಹೊಂದಿದ್ದು ವರ್ಷದ ಯಾವುದೇ ಸಮಯದಲ್ಲಿ ಇಲ್ಲಿನ ಯಾವುದೇ ಪ್ರದೇಶಕ್ಕೆ ಭೇಟಿ ನೀಡಬಹುದು. ಆದಾಗ್ಯೂ  ಅತೀಯಾಗಿ ಮಳೆ ಬೀಳುವ ಸಮಯವಾದ ಜುಲೈ ತಿಂಗಳು ಹಾಗೂ ಆಗಸ್ಟ್ ತಿಂಗಳುಗಳಲ್ಲಿ ಪ್ರಯಾಣದ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲ.

ಬೇಸಿಗೆಗಾಲ

ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ಪನ್ಹಾಲಾ ಪಟ್ಟಣವು ಬೇಸಿಗೆಯನ್ನು ಅನುಭವಿಸುತ್ತದೆ. ಬೇಸಿಗೆಯಲ್ಲಿ ಬಿಸಿಯಾದ ವಾಯುಗುಣವಿದ್ದರೂ ಅತ್ಯಧಿಕ ಶಾಖವನ್ನು ಹೊಂದಿರುವುದಿಲ್ಲ. ಈ ಸಮಯದಲ್ಲಿ ತಾಪಮಾನವು 28 ಡಿ. ಸೆ ಇದ್ದು ತಂಪಾಗಿರುತ್ತದೆ.

ಮಳೆಗಾಲ

ಪನ್ಹಾಲಾದಲ್ಲಿ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳುಗಳನ್ನು ಮಳೆಗಾಲ ಎಂದು ಗುರುತಿಸಲಾಗುತ್ತದೆ. ಈ ಸಮಯದಲ್ಲಿ ಪನ್ಹಾಲಾ ಪ್ರದೇಶವು ಅಧಿಕ ಮಳೆಯನ್ನು ಅನುಭವಿಸುತ್ತಿದ್ದು ಇಲ್ಲಿಗೆ ಭೇಟಿ ನೀಡಲು ಇದು ಒಳ್ಳೆಯ ಸಮಯ. ಈ ಸಂದರ್ಭದಲ್ಲಿ ತಾಪಮಾನವು ಸರಿ ಸುಮಾರು 23 ಡಿ. ಸೆ ನಷ್ಟು ದಾಖಲಾಗುತ್ತದೆ.

ಚಳಿಗಾಲ

ನವೆಂಬರ್ ತಿಂಗಳಿನಿಂದ ಫೆಬ್ರುವರಿ ತಿಂಗಳವರೆಗೆ ಪನ್ಹಾಲಾದಲ್ಲಿ ಚಳಿಗಾಲದ ಸಮಯ. ಚಳಿಗಾಲವು ಇಲ್ಲಿ ಅತಿ ತಂಪಾಗಿದ್ದು ಈ ಸ್ಥಳಕ್ಕೆ ಪ್ರವಾಸಿಗರನ್ನು ಆಹ್ವಾನಿಸುತ್ತದೆ. ಈ ಸಮಯದಲ್ಲಿ ತಾಪಮಾನವು ಕನಿಷ್ಠ 10 ಡಿ.ಸೆ ಹಾಗೂ ಗರಿಷ್ಠ 25 ಡಿ.ಸೆ ನಷ್ಟು ದಾಖಲಾಗುತ್ತದೆ.