Search
  • Follow NativePlanet
Share
ಮುಖಪುಟ » ಸ್ಥಳಗಳು » ಪಂಚಗಣಿ » ಹವಾಮಾನ

ಪಂಚಗಣಿ ಹವಾಮಾನ

ಪಂಚಗಣಿಯು ವರ್ಷದ ಪೂರ್ತಿ ಮಿತವಾದ ಹವಾಗುಣವನ್ನು ಹೊಂದಿದೆ. ಪಂಚಗಣಿಯಲ್ಲಿರುವ ಐದು ಬೆಟ್ಟಗಳು ತನ್ನ ತಂಪಾದ, ಆಕರ್ಷಿಸುವ ಹವಾಮಾನಕ್ಕೆ ಕಾರಣವಾಗಿವೆ. ಈ ಸ್ಥಳವನ್ನು ವರ್ಷವಿಡೀ ಯಾವುದೇ ಸಮಯದಲ್ಲಿ ಭೇಟಿ ಮಾಡಬಹುದು.

ಬೇಸಿಗೆಗಾಲ

ಪಂಚಗಣಿಯಲ್ಲಿ ಬೇಸಿಗೆ ಕಾಲ ಮಾರ್ಚ್ ತಿಂಗಳಿನಲ್ಲಿ ಪ್ರಾರಂಭವಾಗಿ ಮೇ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ. ತಾಪಮಾನವು ಗರಿಷ್ಠ 35° C ಇದ್ದು ಕನಿಷ್ಠ 20° C ವರೆಗೆ ಇರುತ್ತದೆ. ಆರ್ದ್ರತೆ ಈ ಸಮಯದಲ್ಲಿ ತುಂಬಾ ಕಡಿಮೆ ಇರುತ್ತದೆ. ವರ್ಷದ ಈ ಸಮಯದಲ್ಲಿ ಸ್ಟ್ರಾಬೆರಿ ಉತ್ಸವ ನಡೆಯುತ್ತದೆ.

ಮಳೆಗಾಲ

ಪಂಚಗಣಿಯಲ್ಲಿ ಮುಂಗಾರು ಜೂನ್ ತಿಂಗಳಲ್ಲಿ ಬಂದು ಸೆಪ್ಟೆಂಬರ್ ತನಕ ವಿಸ್ತರಿಸುತ್ತದೆ. ಈ ಪ್ರದೇಶ ವಾರ್ಷಿಕವಾಗಿ ಮಧ್ಯಮ ಮಳೆಯನ್ನು ಪಡೆಯುತ್ತದೆ. ಪ್ರವಾಸಿಗರು ಸಾಮಾನ್ಯವಾಗಿ ಪಂಚಗಣಿಗೆ ಭೇಟಿ ನೀಡಲು ಅತ್ಯಂತ ಸೂಕ್ತ ಸಮಯವೆಂದು ತೆಗೆದುಕೊಳ್ಳುತ್ತಾರೆ.

ಚಳಿಗಾಲ

ಚಳಿಗಾಲದಲ್ಲಿ ತಾಪಮಾನ ಸುಮಾರು 16 ° ಸಿ ಇರುತ್ತದೆ. ಫೆಬ್ರವರಿ ಯಿಂದ ಡಿಸೆಂಬರ್ ವರೆಗು ಇರುತ್ತದೆ, ಈ ಸ್ಥಳವನ್ನು ಅನ್ವೇಷಿಸಲು ಈ ಋತುವು ಸೂಕ್ತವಾಗಿದೆ.