Search
  • Follow NativePlanet
Share
ಮುಖಪುಟ » ಸ್ಥಳಗಳು » ನುರ್ಪುರ್ » ಹವಾಮಾನ

ನುರ್ಪುರ್ ಹವಾಮಾನ

ಸಪ್ಟೆಂಬರ್ ಮತ್ತು ಜೂನ್‌ ಮಧ್ಯದ ಅವಧಿಯಲ್ಲಿ ನುರ್ಪುರಕ್ಕೆ ಭೇಟಿ ಮಾಡುವುದು ಸೂಕ್ತ. ಬೇಸಿಗೆಗಾಲವು ಚಾರಣಕ್ಕೆ ಅತ್ಯುತ್ತಮ ಕಾಲ. ಜುಲೈ ಮತ್ತು ಅಗಸ್ಟ್‌ನಲ್ಲಿ ಒಳಾಂಗಣ ಚಟುವಟಿಕೆ ಕೈಗೊಳ್ಳಲು ಸೂಕ್ತ. ದೇವಸ್ಥಾನಗಳಲ್ಲಿ ಈ ಅವಧಿಯಲ್ಲಿ ಸಮಯ ಕಳೆಯಬಹುದು. ಇದರ ಜೊತೆಗೆ ಸಪ್ಟೆಂಬರ್ ಮತ್ತು ನವೆಂಬರಿನ ಅವಧಿಯಲ್ಲಿ ತಿರುಗಾಡಲು, ಚಾರಣಕ್ಕೆ ಮತ್ತು ದೇವಸ್ಥಾನಗಳನ್ನು ವೀಕ್ಷಿಸಲು ಸರಿಯಾದ ಸಮಯ. ಮಂಜು ಮುಸುಕಿದ ಪರ್ವತಗಳನ್ನು ನೋಡಲು ಇಷ್ಟಪಡುವ ಪ್ರವಾಸಿಗರು ನುರ್ಪುರಕ್ಕೆ ಡಿಸೆಂಬರ್ ಮತ್ತು ಫೆಬ್ರುವರಿಯ ಅವಧಿಯಲ್ಲೂ ಭೇಟಿ ಮಾಡಬಹುದು.

ಬೇಸಿಗೆಗಾಲ

(ಮಾರ್ಚ್‌ನಿಂದ ಜೂನ್‌): ಮಾರ್ಚ್‌ ತಿಂಗಳಿನಲ್ಲಿ ನುರ್ಪುರದಲ್ಲಿ ಬೇಸಿಗೆಗಾಲ ಆರಂಭವಾಗುತ್ತದೆ. ಈ ಅವಧಿಯಲ್ಲಿ ಇಲ್ಲಿನ ವಾತಾವರಣವು 22 ಡಿಗ್ರಿಯಿಂದ 38 ಡಿಗ್ರಿಯ ತನಕ ಇರುತ್ತದೆ. ಈ ಅವಧಿಯಲ್ಲಿ ಚಾರಣ ಮಾಡುವುದು ಸೂಕ್ತ.

ಮಳೆಗಾಲ

(ಜುಲೈನಿಂದ ಸಪ್ಟೆಂಬರ್): ನುರ್ಪುರದಲ್ಲಿ ಮಳೆಗಾಲ ಶುರುವಾಗುವುದು ಜುಲೈನಲ್ಲಿ ಮತ್ತು ಸಪ್ಟೆಂಬರಿನ ತನಕವೂ ಮಳೆಗಾಲ ಮುಂದುವರಿಯುತ್ತದೆ. ನುರ್ಪುರದಲ್ಲಿ ವಿಪರೀತ ಮಳೆ ಬೀಳುತ್ತದೆ. ಪ್ರವಾಸಿಗರು ಸೂಕ್ತ ರೈನ್‌ಕೋಟ್‌ಗಳನ್ನೋ ಅಥವಾ ಇತರ ರಕ್ಷಣಾ ಕ್ರಮಗಳನ್ನು ಕೈಗೊಂಡು ಪ್ರಯಾಣ ಮಾಡುವುದು ಸೂಕ್ತ.

ಚಳಿಗಾಲ

(ಡಿಸೆಂಬರಿನಿಂದ ಫೆಬ್ರುವರಿ): ನುರ್ಪುರದಲ್ಲಿ ಚಳಿಗಾಲ ಡಿಸೆಂಬರಿನಿಂದ ಫೆಬ್ರವರಿಯವರೆಗೆ ಇರುತ್ತದೆ. ಈ ಸಮಯದಲ್ಲಿ ಈ ಪ್ರದೇಶದ ವಾತಾವರಣವು ವಿಪರೀತ ಚಳಿಯಿಂದ ಕೂಡಿರುತ್ತದೆ. ತಾಪಮಾನವು ಕನಿಷ್ಟ 4 ಡಿಗ್ರಿಯ ತನಕವೂ ಇಳಿಯುತ್ತದೆ. ಮಂಜು ಸುರಿಯುವುದರಿಂದಾಗಿ ರಸ್ತೆಗಳೇ ಕಾಣಿಸುವುದಿಲ್ಲ.