Search
  • Follow NativePlanet
Share

ನೆರ್ಸ –  ಕಡಿದಾದ ಹಾದಿಯ ನಡುವಿನ ತಾಣ.

11

ನೆರ್ಸ ಎಂಬುದು ಕರ್ನಾಟಕ ಮತ್ತು ಗೋವಾ ಗಡಿಯಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಗ್ರಾಮವು ತನ್ನಲ್ಲಿರುವ ಶ್ರೀಮಂತ ಜೀವವೈವಿಧ್ಯದಿಂದಾಗಿ ವಿಶ್ವ ವಿಖ್ಯಾತಿ ಪಡೆದಿದೆ. ಹಚ್ಚ ಹಸಿರಿನಿಂದ ಕೂಡಿರುವ ನೆರ್ಸ ಗ್ರಾಮವು ನಿಮಗೆ ನಿಜವಾದ ರಜೆಯ ಮೋಜು ಆನಂದಿಸಲು ಅವಕಾಶ ಮಾಡಿಕೊಡುತ್ತದೆ. ಈ ಸಣ್ಣಗ್ರಾಮವು ಪಕ್ಷಿ ವೀಕ್ಷಕರಿಗೆ ಮತ್ತು ವನ್ಯಜೀವಿ ಆಸಕ್ತರಿಗೆ ಸ್ವರ್ಗವೆಂದು ಪರಿಗಣಿಸಲ್ಪಟ್ಟಿದೆ. ಈ ಕಾರಣದಿಂದಾಗಿ ಆಸಕ್ತರಿಗೆ ಈ ಗ್ರಾಮ ಅತ್ಯಂತ ಪ್ರಸಿದ್ಧವಾಗಿದೆ.

 

ನೆರ್ಸದಲ್ಲಿ ನೋಡಬಹುದಾದುದು ಏನು?

ನೆರ್ಸಾ ಗ್ರಾಮವು ಪ್ರಾಕೃತಿಕ ಸೊಬಗಿನ ಖನಿಯನ್ನೇ ಹೊಂದಿದೆ. ಪಶ್ಚಿಮ ಘಟ್ಟಗಳ ಹಚ್ಚ ಹಸಿರಿನ ದಟ್ಟ ಅರಣ್ಯಗಳು ಚಾರಣಕ್ಕೆ, ಪಕ್ಷಿ ವೀಕ್ಷಣೆಗೆ ಮತ್ತು ಪ್ರಾಣಿಗಳ ಜಾಡು ಹಿಡಿದು ತಿರುಗಾಡಲು ಅತ್ಯಂತ ಸೂಕ್ತವಾಗಿದೆ. ನೆರ್ಸ ಗ್ರಾಮಕ್ಕೆ ನೀವು ಭೇಟಿಕೊಟ್ಟಾಗ ನೀವು ಇಲ್ಲಿಗೆ ಸಮೀಪದ ಭೀಮ್ ಘಡ್, ಕೊಂಗ್ಲ, ಅಬ್ನಲಿ ಮತ್ತು ಜಂಗೋನ್ ನಂತಹ ತಾಣಗಳನ್ನು ಸಹ ನೋಡಬಹುದು. ಇಲ್ಲಿನ ಕೆಲವು ತಾಣಗಳಿಗೆ ಕಾಲ್ನಡಿಗೆಯನ್ನು ಹೊರತು ಪಡಿಸಿ ಬೇರಾವ ಸಾರಿಗೆಯ ಮೂಲಕ ತಲುಪಲು ಸಾಧ್ಯವಿಲ್ಲ.  ಪಕ್ಷಿ ವೀಕ್ಷಣೆ, ಚಿಟ್ಟೆಗಳನ್ನು ಕಾಣಲು ಮತ್ತು ಇಲ್ಲಿನ ಜೀವ ವೈವಿಧ್ಯದ ಸೊಬಗು ಸವಿಯಲು ಬಯಸುವ ಆಸಕ್ತರಿಗೆ ಇಲ್ಲಿನ ಕಾಡುಗಳು ಮರೆಯಲಾಗದ ಅನುಭವ ನೀಡುತ್ತದೆ. ಆದರೆ ಅದಕ್ಕಾಗಿ ಒಂದು ಕಠಿಣ ಚಾರಣ ಮಾಡಲು ತಯಾರಾಗಿರಬೇಕು ಅಷ್ಟೆ.

 

ನೆರ್ಸದ ಮರೆಯಲಾಗದ ತಾಣಗಳಲ್ಲಿ ತಲೆವಡಿ ಒಂದು. ತಲೆವಡಿಯು ಬಾವಲಿಗಳಿಗಾಗಿ ಪ್ರಸಿದ್ಧಿಪಡೆದಿದ್ದು, ಇಲ್ಲಿ 40 ಬಗೆಯ ಬಾವಲಿಯ ಜಾತಿಗಳನ್ನು ಗುರುತಿಸಲಾಗಿದೆ. ಲೊಂಡ ಕಾಡಿನಲ್ಲಿರುವ ಬರಪೆಡಿ ಗುಹೆಯು 200ಕ್ಕು ಅಧಿಕ ಬಾವಲಿಗಳಿಗೆ ಆಶ್ರಯವನ್ನು ಒದಗಿಸಿದೆ.

ಖಾನಾಪುರವು ಇಲ್ಲಿಗೆ ಸಮೀಪದ ಪ್ರಮುಖ ರೈಲು ನಿಲ್ದಾಣವಾಗಿದೆ. ಈ ಗ್ರಾಮವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 500 ಕಿ,ಮೀ ದೂರದಲ್ಲಿದೆ. ನೀವು ಬೆಂಗಳೂರಿನಿಂದ ನೆರ್ಸಗೆ ರಾತ್ರಿಯಲ್ಲಿ ಹೊರಡುವ ಸುವಿಹಾರಿ ಬಸ್ಸುಗಳ ಮೂಲಕ ತಲುಪಬಹುದು.

ನೆರ್ಸ ಪ್ರಸಿದ್ಧವಾಗಿದೆ

ನೆರ್ಸ ಹವಾಮಾನ

ಉತ್ತಮ ಸಮಯ ನೆರ್ಸ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ನೆರ್ಸ

  • ರಸ್ತೆಯ ಮೂಲಕ
    ಪ್ರವಾಸಿಗರು ಕೆ ಎಸ್ ಆರ್ ಟಿ ಸಿ ( ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಬಸ್ಸುಗಳ ಮೂಲಕ ಬೆಂಗಳೂರಿನಿಂದ ನೆರ್ಸಗೆ ತಲುಪಬಹುದು. ಅಲ್ಲದೆ ಬೆಂಗಳೂರಿನಿಂದ ನೆರ್ಸಗೆ ಖಾಸಗಿ ಬಸ್ಸುಗಳೂ ಸಹ ಹೋಗುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಖಾನಪುರ ರೈಲು ನಿಲ್ದಾಣವು ಇಲ್ಲಿಗೆ ಸಮೀಪದ ಪ್ರಮುಖ ರೈಲು ನಿಲ್ದಾಣವಾಗಿದೆ. ಇದು ಇಲ್ಲಿಂದ 18 ಕಿ,ಮೀ ದೂರದಲ್ಲಿದೆ. ಅಷ್ಟೇ ಅಲ್ಲದೆ ಭಾರತದ ವಿವಿಧ ಭಾಗಗಳಿಂದ ಆಗಮಿಸುವ ಪ್ರವಾಸಿಗರಿಗೆ ಬೆಳಗಾವಿ ರೈಲು ನಿಲ್ದಾಣವು ಅನುಕೂಲಕರವಾಗಿದೆ. ಈ ನಿಲ್ದಾಣವು ಭಾರತದ ಪ್ರಮುಖ ನಗರ ಮತ್ತು ಪಟ್ಟಣಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಈ ನಿಲ್ದಾಣವು ನೆರ್ಸದಿಂದ 38 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಇಲ್ಲಿಂದ ಬಾಡಿಗೆ ವಾಹನ ಮತ್ತು ಟ್ಯಾಕ್ಸಿಗಳ ಮೂಲಕ ನೆರ್ಸ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನೆರ್ಸಗೆ ಸಮೀಪದ ವಿಮಾನನಿಲ್ದಾಣವಾಗಿದೆ. ಇದು ಈ ಗಿರಿಧಾಮದಿಂದ 505 ಕಿ.ಮೀ ದೂರದಲ್ಲಿದೆ. ಈ ನಿಲ್ದಾಣವು ದೇಶೀಯ ಮತ್ತು ವಿದೇಶಿಯ ಪ್ರವಾಸಿಗರ ಎಲ್ಲ ಬೇಡಿಕೆಗಳನ್ನು ಪೂರೈಸುತ್ತದೆ. ಬೆಂಗಳೂರು ಯೂರೋಪ್, ಏಶಿಯಾ, ಅಮೆರಿಕಾ ಮತ್ತು ಮಧ್ಯಪ್ರಾಚ್ಯದ ಹಲವು ದೇಶಗಳ ನಡುವೆ ಉತ್ತಮ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
11 Jul,Sat
Return On
12 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Jul,Sat
Check Out
12 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Jul,Sat
Return On
12 Jul,Sun