Search
  • Follow NativePlanet
Share
ಮುಖಪುಟ » ಸ್ಥಳಗಳು » ನೀಮಚ್ » ಹವಾಮಾನ

ನೀಮಚ್ ಹವಾಮಾನ

ನೀಮಚ್ ಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ  ಅಕ್ಟೋಬರ್ ನಿಂದ ಮಾರ್ಚ್ ವರೆಗೆ. ವರ್ಷದ ಎಲ್ಲಾ  ಸಮಯದಲ್ಲೂ ಇಲ್ಲಿಗೆ ಭೇಟಿ ನೀಡಬಹುದಾದರೂ ಈ ಸಮಯ ತುಂಬಾ ಯೋಗ್ಯವಾದದ್ದು.

ಬೇಸಿಗೆಗಾಲ

ನೀಮಚ್ ನಲ್ಲಿ ಇದುವರೆಗೆ ದಾಖಲೆಗೊಂಡ ಗರಿಷ್ಠ ತಾಪಮಾನ 32 ಡಿಗ್ರಿ ಯಾಗಿದ್ದು, ಇದು ಯಾತ್ರಿಗಳಿಗೆ ಹಿತವಾದ ತಾಪಮಾನವಾಗಿದೆ. ಇಲ್ಲಿ ಹೆಚ್ಚಿನ ಸಮಯದಲ್ಲಿ ಆಹ್ಲಾದಕರವಾದ ವಾತಾವರಣವನ್ನು ನಿರೀಕ್ಷಿಸಬಹುದು. ನೀಮಚ್ ನಲ್ಲಿನ ನಿವಾಸಿಗಳಿಗೆ ಹಾಗೂ ಯಾತ್ರಿಗಳಿಗೆ ಬೇಸಿಗೆಗಾಲ ಆಹ್ಲಾದಕರವಾಗಿರುತ್ತದೆ.

ಮಳೆಗಾಲ

ನೀಮಚ್ ನಲ್ಲಿ ಮಳೆಗಾಲ ಸುಖಕರವಾಗಿರುತ್ತದೆ. ಹಿತವಾಗಿ ಮಳೆ ಸುರಿಯುತ್ತಿದ್ದು, ಮಳೆಗಾಲ ಇಲ್ಲಿನ ಸ್ಥಳಗಳನ್ನು ಸುತ್ತಾಡಲು ಅನುಕೂಲವಾಗಿರುತ್ತದೆ. ಇಲ್ಲಿನ ಸಾಧಾರಣ ಮಳೆಸುರಿತ 1343.6 ಮಿಲಿಮೀಟರ್. ಮಳೆಗಾಲದಲ್ಲಿ ನೀಮಚ್ ನಲ್ಲಿ ಮರೆಯಲಾಗದ ಸಮಯವನ್ನು ಪ್ರತೀಕ್ಷಿಸಬಹುದು.

ಚಳಿಗಾಲ

ನೀಮಚ್ ನಲ್ಲಿ ಚಳಿಗಾಲ ನವೆಂಬರ್ ನಲ್ಲಿ ಶುರುವಾಗುತ್ತದೆ. ಇಲ್ಲಿನ ಕನಿಷ್ಠ ತಾಪಮಾನ 19.42 ಡಿಗ್ರಿ ಇರುತ್ತದೆ. ಚಳಿಗಾಲದ ಸಮಯದಲ್ಲಿ ಸಂಜೆ ಹೊತ್ತು ತಂಪು ಹಾಗೂ ಹಿತಕರವಾಗಿರುತ್ತದೆ. ಚಳಿಗಾಲದಲ್ಲಿ ಇಲ್ಲಿನ ಹವಾಮಾನ ಆನಂದಮಯವಾಗಿರುತ್ತದೆ.