ವರ್ಷಪೂರ್ತಿ ಈ ಪ್ರದೇಶಕ್ಕೆ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರಾದರೂ, ಅಕ್ಟೋಬರ್ ನಿಂದ ಮಾರ್ಚ್ ಮಧ್ಯದ ಅವಧಿಯು ಇಲ್ಲಿಗೆ ಭೇಟಿ ನೀಡಲು ಹೇಳಿಮಾಡಿಸಿದ ಸಮಯವಾಗಿದೆ. ಇನ್ನುಳಿದಂತೆ ಏಪ್ರಿಲ್ ಹಾಗು ಮೇ ತಿಂಗಳುಗಳು ಕೆಲವು ಪ್ರಮುಖ ಧಾರ್ಮಿಕ ಚಟುವಟಿಕೆಗಳಿಂದ ಕೂಡಿರುವುದರಿಂದ ಧಾರ್ಮಿಕ ಪ್ರವಾಸ ಕೈಗೊಳ್ಳುವುದಕ್ಕೆ ಉತ್ತಮವಾಗಿರುತ್ತದೆ.
ಇಲ್ಲಿನ ಬೇಸಿಗೆಯ ಅವಧಿ ಮಾರ್ಚ್ - ಮೇ. ಈ ಸಂದರ್ಭದಲ್ಲಿ ಇಲ್ಲಿ ಸಾಮಾನ್ಯವಾಗಿ ದಾಖಲಾಗುವ ತಾಪಮಾನ ಕನಿಷ್ಠ 28° ಸೆಲ್ಶಿಯಸ್ ಹಾಗು ಗರಿಷ್ಠ 38° ಸೆಲ್ಶಿಯಸ್. ಈ ಸಮಯ ಇಲ್ಲಿ ಸುತ್ತಾಡಲು ಅಷ್ಟೊಂದು ಹಿತಕರವಾಗಿರುವುದಿಲ್ಲ.
ಇಲ್ಲಿನ ಮಳೆಗಾಲದ ಅವಧಿ ಜೂನ್ ನಿಂದ ಸೆಪ್ಟಂಬರ್. ಈ ಸಮಯದಲ್ಲಿ ಪ್ರದೇಶವು ಕಡಿಮೆಯಿಂದ ಮಧ್ಯಮ ಪ್ರಮಾಣದವರೆಗೂ ಮಳೆಯನ್ನು ಪಡೆಯುತ್ತದೆ. ವಾತಾವರಣವು ಈ ಸಂದರ್ಭದಲ್ಲಿ ಸಮಾಧಾನಕರವಾಗಿದ್ದು, ಶೀಘ್ರ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿರುತ್ತದೆ.
ಇಲ್ಲಿನ ಚಳಿಗಾಲದ ಅವಧಿ ಡಿಸೆಂಬರ್ ನಿಂದ ಫೆಬ್ರುವರಿ. ಈ ಸಂದರ್ಭದಲ್ಲಿ ಇಲ್ಲಿ ಸಾಮಾನ್ಯವಾಗಿ ದಾಖಲಾಗುವ ತಾಪಮಾನ ಕನಿಷ್ಠ 20° ಸೆಲ್ಶಿಯಸ್ ಹಾಗು ಗರಿಷ್ಠ 30° ಸೆಲ್ಶಿಯಸ್. ಈ ಒಂದು ಅವಧಿಯು ಇಲ್ಲಿ ಪ್ರವಾಸ ಕೈಗೊಳ್ಳಲು ಅತ್ತ್ಯುತ್ತಮವಾದ ಸಮಯ.