Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊಹಾಲಿ » ಹವಾಮಾನ

ಮೊಹಾಲಿ ಹವಾಮಾನ

ಉಷ್ಣಾಂಶ ಹೆಚ್ಚಿರುವುದರಿಂದ ಬೇಸಿಗೆಯಲ್ಲಿ ಇಲ್ಲಿ ಪ್ರವಾಸ ಕೈಗೊಳ್ಳುವುದು ಕಷ್ಟ.ಮಳೆ ಬೇಸಿಗೆಯ ಬಿಸಿಲಿನಿಂದ ಮುಕ್ತಿ ನೀಡಿದರೂ ಕೂಡ ಈ ಸಮಯದಲ್ಲಿ ಸಣ್ಣ ಪ್ರವಾಸಕ್ಕೆ ಮಾತ್ರ ಯೋಗ್ಯ.ಅಕ್ಟೋಬರ್ ನಿಂದ ಮಾರ್ಚ್ ಅವಧಿ ಪ್ರವಾಸಕ್ಕೆ ಉತ್ತಮವಾದ ಕಾಲವಾಗಿದೆ.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ಮೊಹಾಲಿಯಲ್ಲಿ ಬೇಸಿಗೆ. ಈ ಸಮಯದಲ್ಲಿ 35 ಡಿಗ್ರಿ ಸೆಲ್ಸಿಯಸ್ ನಿಂದ 40 ರ ವರೆಗೆ ಹೋಗುವ ಉಷ್ಣಾಂಶ ಅತಿ ಹೆಚ್ಚು ಬೇಸಿಗೆ ತಾಪಮಾನ ಹೊಂದಿರುತ್ತದೆ.ಕೆಲವೊಮ್ಮೆ 44 ಡಿಗ್ರಿ ಕೂಡ ತಲುಪಬಹುದು. ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಪ್ರವಾಸಿಗರು ಇಲ್ಲಿ ಭೇಟಿ ನೀಡುವುದು ಸೂಕ್ತವಲ್ಲ.

ಮಳೆಗಾಲ

ಜೂನ್ ನಿಂದ ಆಗಸ್ಟ್ ವರೆಗೆ ಮೊಹಾಲಿಯಲ್ಲಿ ಮಳೆಗಾಲ,ನಗರದ ಉಪೋಷ್ಣವಲಯದ ಕಾರಣವಾಗಿ ಆರ್ದ್ರ ವಾತಾವರಣ ಹೊಂದಿರುತ್ತದೆ.ನಗರದಲ್ಲಿ ಈ ಸಮಯದಲ್ಲಿ ಹದವಾದ,ಮಧ್ಯಮ ರೀತಿಯ ಮತ್ತು ಭಾರೀ ಮಳೆ ಸುರಿಯುತ್ತದೆ. ಇಲ್ಲಿನ ಸರಾಸರಿ ಮಳೆ 617 ಎನ್ನಲಾಗಿದೆ.ಶರತ್ಕಾಲದ ಮಳೆ ಆಹ್ಲಾದಕರವಾಗಿದ್ದು ಅಕ್ಟೋಬರ್ ವರೆಗೆ ಮಳೆಗಾಲ ಇರುತ್ತದೆ.

ಚಳಿಗಾಲ

ನವೆಂಬರ್ ನಿಂದ ಫೆಬ್ರವರಿ ಮೊಹಾಲಿಯಲ್ಲಿ ಹದವಾದ ವಾತಾವರಣವಿರುತ್ತದೆ.ಈ ಸಮಯದಲ್ಲಿ ಅತಿ ಹೆಚ್ಚು ಉಷ್ಣಾಂಶ 7 ಡಿಗ್ರಿ ಸೆಲ್ಸಿಯಸ್ ನಿಂದ 15 ರ ವರೆಗೆ ಇರುತ್ತದೆ ಮತ್ತು ಕಡಿಮೆ ಉಷ್ಣಾಂಶ 1 ಡಿಗ್ರಿ ಸೆಲ್ಸಿಯಸ್ ನಿಂದ 5 ರ ವರೆಗೆ ತಲುಪುತ್ತದೆ.ಡಿಸೆಂಬರ್ ನಿಂದ ಜನವರಿ ಸಾಮಾನ್ಯವಾಗಿ ಚಳಿಗಾಲವಾದರೂ ಈ ಋತುವಿನಲ್ಲಿ ಮಳೆ ಬರುವ ಸಾಧ್ಯತೆ ಇರುತ್ತದೆ.