ಉಷ್ಣವಲಯದ ಮರಾರಿಕುಲಂ, ಪ್ರವಾಸಿಗರಿಗೆ ಎಲ್ಲಾ ಕಾಲದಲ್ಲೂ ಪ್ರವಾಸ ಕೈಗೊಳ್ಳಬಹುದಾದ ತಾಣವಾಗಿದೆ. ಆದಾಗ್ಯೂ, ಬೇಸಿಗೆಕಾಲ ಮತ್ತು ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತವಲ್ಲ. ಸಪ್ಟೆಂಬರಿನಿಂದ ಮಾರ್ಚ್ನ ಅವಧಿಯು ಮರಾರಿಕುಲಂ ಗೆ ಭೇಟಿ ನೀಡಲು ಸೂಕ್ತ ಕಾಲ.
ಮರಾರಿಕುಲಂ ಉಷ್ಣವಲಯ ವೃತ್ತದಲ್ಲಿದೆ, ಆದರೂ ಮಧ್ಯಮ ಮತ್ತು ಸಮಾನ ವಾತಾವರಣವನ್ನು ಹೊಂದಿದೆ. ಕರಾವಳಿಯ ಹಳ್ಳಿಯಾದರೂ ಕೂಡಾ ತೇವ ವಾತಾವರಣವನ್ನು ಹೊಂದಿರುತ್ತದೆ. ಬೇಸಿಗೆಕಾಲವು ಮಾರ್ಚ್ನಲ್ಲಿ ಆರಂಭವಾಗಿ ಮೇ ತನಕವೂ ಇರುತ್ತದೆ. ಬೇಸಿಗೆಕಾಲದಲ್ಲಿ ವಾತಾವರಣವು ಸುಮಾರು 32 ಡಿಗ್ರಿಯಿಂದ 36 ಡಿಗ್ರಿ ತನಕ ಇರುತ್ತದೆ. ಮರಾರಿಕುಲಂ ಗೆ ಬೇಸಿಗೆಯಲ್ಲಿ ಪ್ರವಾಸ ಮಾಡುವುದಾದಲ್ಲಿ ಕಾಟನ್ ಬಟ್ಟೆಗಳನ್ನು ಕೊಂಡೊಯ್ಯುವುದನ್ನು ಮರೆಯಬೇಡಿ.
ಇಲ್ಲಿನ ವಾತಾವರಣವು ಕೇರಳದ ಇತರ ಕರಾವಳಿಯ ಭಾಗಗಳಿಗೆ ಹೊಂದಿಕೆಯಾಗುವಂಥದ್ದು. ಮಳೆಗಾಲವು ಐಶಾನ್ಯ ಮತ್ತು ನೈರುತ್ಯ ಮಾನ್ಸೂನ್ನಿಂದಾಗಿ ವಿಪರೀತ ಮಳೆಯನ್ನು ಆಕರ್ಷಿಸುತ್ತದೆ. ಕರಿಮೋಡಗಳು ಮರಾರಿಕುಲಂ ನ ಮೇಲೆ ಜೂನ್ನಿಂದ ಸಪ್ಟೆಂಬರಿನವರೆಗೂ ಸುತ್ತುತ್ತಲೇ ಇರುತ್ತವೆ.
ಮರಾರಿಕುಲಂ ನ ಚಳಿಗಾಲವು ಪ್ರಶಾಂತವಾಗಿದ್ದು ಆಹ್ಲಾದಕರವಾಗಿರುತ್ತದೆ. ಚಳಿಗಾಲ ಡಿಸೆಂಬರಿನಲ್ಲಿ ಆರಂಭವಾಗಿ ಫೆಬ್ರುವರಿಯ ತನಕ ಮುಂದುವರಿಯುತ್ತದೆ. ಈ ಅವಧಿಯಲ್ಲಿ ವಾತಾವರಣ ತುಂಬಾ ಹಿತವಾಗಿರುತ್ತದೆ. ಉಷ್ಣಾಂಶವು 24 ಡಿಗ್ರಿ ಯಿಂದ 32 ಡಿಗ್ರಿಯ ತನಕ ಇರುತ್ತದೆ.