ಮಂಗಳೂರು ಖುದ್ದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ. ರಾಷ್ಟ್ರದ ನಾನಾ ರಾಜ್ಯಗಳಿಂದ ಹಾಗೂ ಹೊರ ರಾಷ್ಟ್ರದ ಕೆಲ ಭಾಗದಿಂದಲೂ ನೇರ ಸಂಪರ್ಕ ಹೊಂದಿದೆ. ಇಲ್ಲಿನ ಬಜ್ಪೆ ಬಳಿ ವಿಮಾನ ನಿಲ್ದಾಣ ಇದೆ. ಮಂಗಳೂರಿನಿಂದ 20 ಕಿ.ಮೀ. ದೂರದಲ್ಲಿದೆ. ಸ್ಪೈಸ್ ಜೆಟ್, ಏರ್ ಇಂಡಿಯಾ ವಿಮಾನಗಳು ಇಲ್ಲಿಗೆ ಆಗಮಿಸುತ್ತವೆ.