Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಹೆ » ಹವಾಮಾನ

ಮಾಹೆ ಹವಾಮಾನ

ಮಾಹೆಗೆ ಪ್ರಯಾಣ ಬೆಳೆಸಲು ಸೂಕ್ತ ಕಾಲವೆಂದರೆ ಅಕ್ಟೋಬರಿನಿಂದ ಮಾರ್ಚ್ ಅವಧಿ. ತಾಪಮಾನದ ಕಾರಣದಿಂದ ಹೊರಭಾಗದಲ್ಲಿ ಸುತ್ತಾಡಲು ಸೂಕ್ತವಾಗಿದ್ದು, ಅಕ್ಟೋಬರಿನಿಂದ ಡಿಸೆಂಬರಿನ ಅವಧಿಯಲ್ಲಿ ಹಲವು ಆಕರ್ಷಕ ತಾಣಗಳನ್ನು ನೋಡಿ ಆನಂದಿಸಬಹುದು.

ಬೇಸಿಗೆಗಾಲ

ಮಾಹೆಯನ್ನೇ ಕಾವಲಿಯ ಮೇಲೆ ಇಟ್ಟಂಥ ಬಿಸಿ ಬೇಸಿಗೆಕಾಲದಲ್ಲಿರುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಇಲ್ಲಿಗೆ ಪ್ರಯಾಣಿಸುವುದು ಸೂಕ್ತವಲ್ಲ. ಎಷ್ಟು ಬಿಸಿಯ ವಾತಾವರಣವೆಂದರೆ ಸರಿಯಾದ ಕಾಳಜಿ, ಮುನ್ನೆಚ್ಚರಿಕೆ ವಹಿಸದೇ ಅಲ್ಲಿ ಹೋದರೆ ಡಿಹೈಡ್ರೇಶನ್‌, ಸ್ಟ್ರೋಕ್‌ಗಳು, ಬಿಸಿಯ ಅಲೆಗಳು ನಿಮ್ಮನ್ನು ನುಂಗಿಬಿಡುತ್ತವೆ. ಹೀಗಾಗಿ ಒಂದೊಮ್ಮೆ ಬೇಸಿಗೆಯಲ್ಲಿ ಹೋಗುವುದಾದರೂ ಸೂಕ್ತ ಮುನ್ನೆಚ್ಚರಿಕೆ ವಹಿಸಿ.

ಮಳೆಗಾಲ

ಮಾಹೆಯಲ್ಲಿ ಮಳೆ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಹೀಗಾಗಿ ಹೊರಗೆ ತಿರುಗಾಡುವುದು ಸ್ವಲ್ಪ ಕಷ್ಟ. ಈ ಅವಧಿಯಲ್ಲಿ ಮಾಹೆಗೆ ಪ್ರಯಾಣಿಸುತ್ತೀರಾದರೆ ರೈನ್‌ಕೋಟ್‌ ಅಥವಾ ಕೊಡೆಯನ್ನು ಹಿಡಿದು ಪ್ರಯಾಣಿಸಲೇಬೇಕು. ಯಾಕೆಂದರೆ ಎಷ್ಟು ಹೊತ್ತಿಗೆ ಯಾವ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ ಎನ್ನುವುದನ್ನು ಹೇಳಲಾಗದು.

ಚಳಿಗಾಲ

ಚಳಿಗಾಲ ಇಲ್ಲಿ ಪ್ರಶಾಂತ ವಾತಾವರಣದ ಕಾಲ. 20-25 ಡಿಗ್ರಿ ಸೆಲ್ಷಿಯಸ್‌ ತಾಪಮಾನ ಈ ಅವಧಿಯಲ್ಲಿರುತ್ತದೆ. ಮಾಹೆಗೆ ಪ್ರವಾಸ ಕೈಗೊಳ್ಳಲು ಇದು ಸೂಕ್ತ ಕಾಲ. ಅಲ್ಲದೇ ಇಲ್ಲಿನ ನಗರವೂ ಈ ಅವಧಿಯಲ್ಲಿ ಜನಜಂಗುಳಿಯಿಂದ ಕೂಡಿರುತ್ತದೆ.