Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾಂಗ್ಲೆಂಗ್ » ಹವಾಮಾನ

ಲಾಂಗ್ಲೆಂಗ್ ಹವಾಮಾನ

“ಮಳೆಗಾಲ ಅಲ್ಲದೇ ಇರುವ ದಿನಗಳು” ನಾಗಾಲ್ಯಾಂಡ ರಾಜ್ಯಕ್ಕೆ ಭೇಟಿ ಕೊಡಲು ಅತ್ಯಂತ ಯೋಗ್ಯವಾದ ಕಾಲವಾಗಿದೆ. ಈ ಸಲಹೆ ಲಾಂಗ್ಲೆಂಗಿಗೂ ಅನ್ವಯಿಸುತ್ತದೆ. ನೀವು ಅಕ್ಟೋಬರ್ ನಿಂದ ಮೇ ವರೆಗೂ ಲಾಂಗ್ಲೆಂಗ್ ಗೆ ಭೇಟಿ ಕೊಡಬಹುದು. ಇದು ಭೇಟಿ ಕೊಡಲು ಯೋಗ್ಯವಾದ ಸಮಯವಾಗಿದೆ. ವಸಂತ ಆಗಮನದ ಸಮಯದಲ್ಲಿ ಲಾಂಗ್ಲೆಂಗ್ ನಲ್ಲಿ ನಡೆಯುವ ಮೊನ್ಯು ಉತ್ಸವದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಪ್ರವಾಸಿಗರು ತಮ್ಮ ಲಾಂಗ್ಲೆಂಗ್ ಪ್ರವಾಸ ಯೋಜನೆಯನ್ನು ಹಾಕಿಕೊಂಡರೆ ಒಳ್ಳೆಯದು.

ಬೇಸಿಗೆಗಾಲ

ಲಾಂಗ್ಲೆಂಗ್ ನಲ್ಲಿ ಅಹ್ಲಾದಕರ ಬೇಸಿಗೆ ಕಾಲ ಇರುತ್ತದೆ. ಇಲ್ಲಿಯ ತಾಪಮಾನವು ಸರಾಸರಿ 22 ಡಿಗ್ರಿ ಸೆಲ್ಸಿಯಸ್ ನಿಂದ 27 ಡಿಗ್ರಿ ಸೆಲ್ಸಿಯಸ್ ನವರೆಗೂ ಇರುತ್ತದೆ. ಲಾಂಗ್ಲೆಂಗ್ ನಲ್ಲಿ ನೀವು ಕೇವಲ ಎರಡು ತಿಂಗಳುಗಳ ಕಾಲ ಮಾತ್ರ ಬೇಸಿಗೆ ಕಾಲವನ್ನು ಕಾಣಬಹುದು. ತದನಂತರ ಇಲ್ಲಿ ಮಳೆಗಾಲ ಆಗಮಿಸಿಬಿಡುತ್ತದೆ. ಮಳೆಗಾಲ ಬಂದರೂ ಕೂಡ ಜುಲೈವರೆಗೂ ಅಲ್ಲಿ ಕೆಲಮಟ್ಟಿಗೆ ಬಿಸಿಯಾದ ವಾತಾವರಣ ಇರುತ್ತದೆ.

ಮಳೆಗಾಲ

ಲಾಂಗ್ಲೆಂಗ್ ನಲ್ಲಿ ಮಳೆಗಾಲವು ಮೇ ತಿಂಗಳಿನಿಂದ ಅಕ್ಟೋಬರ್ ತಿಂಗಳ ಕೊನೆಯವರೆಗೂ ಇರುತ್ತದೆ. ನೀವು ಲಾಂಗ್ಲೆಂಗ್ ನಲ್ಲಿ ಹಲವು ತಿಂಗಳಿನವರೆಗೆ ಮಳೆಗಾಲ ಇರುವುದನ್ನು ಕಾಣಬಹುದು. ಇಲ್ಲಿಯ ತಾಪಮಾನವು ಸಾಮಾನ್ಯವಾಗಿ ಕನಿಷ್ಠ ಪ್ರಮಾಣದಲ್ಲಿರುತ್ತದೆ. ಈ ದಿನಗಳು ಬೆಚ್ಚಗಿರುತ್ತವೆ. ಒಂದು ವೇಳೆ ತಂಪಾದ ರಾತ್ರಿಯನ್ನು ಬಯಸಿದರೆ ಇದು ನಿಮಗೆ ಅನುಕೂಲಕರವಾಗಿರುವುದಿಲ್ಲ. ಇಲ್ಲಿಯ ಮಳೆಯ ಪ್ರಮಾಣವಯ 200 ಎಂಎಂನಿಂದ 300 ಎಂಎಂ ನವರೆಗೂ ಇರುತ್ತದೆ.

ಚಳಿಗಾಲ

ಲಾಂಗ್ಲೆಂಗ್ ನಲ್ಲಿ  ಅಕ್ಟೋಬರ್ ನ ತಿಂಗಳ ಅಂತ್ಯ ಇಲ್ಲವೇ ನವೆಂಬರ ತಿಂಗಳ ಆರಂಭದಲ್ಲಿ ಚಳಿಗಾಲ ಆರಂಭವಾಗುತ್ತದೆ. ಈ ಚಳಿಗಾಲವು ಮಾರ್ಚ ತಿಂಗಳಿನವರೆಗೂ ಮುಂದುವರೆಯುತ್ತದೆ. ಲಾಂಗ್ಲೆಂಗ್ನಲ್ಲಿ ನೀವು ಜನೇವರಿ ತಿಂಗಳಲ್ಲಿ ಅತಿಯಾದ ಚಳಿಯ ಅನುಭವವನ್ನು ಪಡೆಯುತ್ತಿರಿ. ಸಾಮಾನ್ಯವಾಗಿ ಶೀತಲ ಗಾಳಿಯು ತಾಪಮಾನದ ಪ್ರಮಾಣವನ್ನು ಕುಗ್ಗಿಸಿ ಚಳಿಯನ್ನು ಹೆಚ್ಚಿಸುತ್ತದೆ. ರಾತ್ರಿಯ ತಾಪಮಾನವು ಸುಮಾರು 1 ಡಿಗ್ರಿ ಸೆಲ್ಸಿಯಸ್ ನವರೆಗೂ ಕಡಿಮೆಯಾಗಬಹುದು.