Search
  • Follow NativePlanet
Share
ಮುಖಪುಟ » ಸ್ಥಳಗಳು » ಕೂಚಿಪುಡಿ » ಹವಾಮಾನ

ಕೂಚಿಪುಡಿ ಹವಾಮಾನ

ಚಳಿಗಾಲದಲ್ಲಿ ಅದರಲ್ಲೂ ಸೂರ್ಯನ ಶಾಖದಿಂದ ಬೆಚ್ಚಗಿನ ವಾತಾವರಣವಿರುವ ಸಂದರ್ಭದಲ್ಲಿ ಕೂಚಿಪುಡಿ ಗ್ರಾಮಕ್ಕೆ ಪ್ರವಾಸಕ್ಕಾಗಿ ಭೇಟಿ ನೀಡುವುದು ಸೂಕ್ತ. ಈ ಸಮಯದಲ್ಲಿ ಹೆಚ್ಚು ಬಿಸಿಲಿನ ಅನುಭವವಾಗುವುದಿಲ್ಲ. ಆದ್ದರಿಂದ ಈ ವೇಳೆ ಕೂಚಿಪುಡಿಗೆ ಬರುವುದರಿಂದ ಪ್ರವಾಸಿಗರಿಗೆ ಈ ಪ್ರಯಾಣವು ಹೆಚ್ಚು ಖುಷಿ ಕೊಡುತ್ತದೆ. ಮಳೆಗಾಲದಲ್ಲಿಯೂ ಕೂಡಾ ಉಶ್ಣಾಂಶವು ಕಡಿಮೆಯಾಗುತ್ತದೆ. ಆದರೆ ಚಂಡ ಮಾರುತದಿಂದ ಉಂಟಾದ ಗಾಳಿ ಮಳೆ ನಿಮ್ಮ ಪ್ರಯಾಣಕ್ಕೆ ಅಡ್ದಿಯುಂಟು ಮಾಡಬಹುದು. ಆದ್ದರಿಂದ ಚಳಿಗಾಲವು ಕೂಚಿಪುಡಿ ಗ್ರಾಮದ ಪ್ರವಾಸಕ್ಕೆ ಪ್ರಶಸ್ತವಾದ ಸಮಯ.

ಬೇಸಿಗೆಗಾಲ

ಕೂಚಿಪುಡಿ ಗ್ರಾಮವು ಭೂಮಧ್ಯ ರೇಖೆಯ ಸಾಮಿಪ್ಯವಿರುವುದರಿಂದ ಬೇಸಿಗೆಯು ಅತ್ಯಧಿಕ ಶಾಖದಿಂದ ಕೂಡಿರುತ್ತದೆ. ಬೇಸಿಗೆಯಲ್ಲಿ ಈ ಗ್ರಾಮದ ತಾಪಮಾನ 45 ಡಿ. ಸೆ ಮಟ್ಟವನ್ನು ಮೀರುತ್ತದೆ. ಈ ಸಂದರ್ಭದಲ್ಲಿ ಇಲ್ಲಿನ ಸಾಮಾನ್ಯ ಜೀವನವೂ ಕೂಡಾ ಕಷ್ಟಕರವಾಗಿರುತ್ತದೆ, ಆದ್ದರಿಂದ ಈ ಬೇಸಿಗೆಯ ಸಮಯದಲ್ಲಿ ಕೂಚಿಪುಡಿ ಗ್ರಾಮಕ್ಕೆ ಪ್ರವಾಸಕ್ಕಾಗಿ ಬರುವುದು ಕಷ್ಟ ಸಾಧ್ಯ. ಬೇಸಿಗೆಯು ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿ ಜುಲೈ ತಿಂಗಳಿನ ಕೊನೆಯವರೆಗೆ ಮುಂದುವರಿಯುತ್ತದೆ. 

ಮಳೆಗಾಲ

ಕೂಚಿಪುಡಿ ಗ್ರಾಮದಲ್ಲಿ ಮಳೆಯು ಸುಮಾರು ಆಗಸ್ಟ್ ತಿಂಗಳಿನಲ್ಲಿ ಆರಂಭವಾಗಿ ಅಕ್ಟೋಬರ್ ತಿಂಗಳಿನ ಅಂತ್ಯದವರೆಗೆ ಸುರಿಯುತ್ತದೆ. ನವೆಂಬರ್ ತಿಂಗಳಿನಲ್ಲಿಯೂ  ಸಹ ಅಲ್ಪ ಪ್ರಮಾಣದ ಮಳೆಯಾಗುತ್ತದೆ. ಇಲ್ಲಿ ಚಂಡಮಾರುತ, ಬಿರುಗಾಳಿಗಳು ಬೀಸದಿದ್ದರೂ ಮಧ್ಯಮ ಪ್ರಮಾಣದ ಮಳೆಯಾಗುತ್ತದೆ. ಈ ಸಮಯದಲ್ಲಿ ತಾಪಮಾನವು 35 ಡಿ. ಸೆ ಗಿಂತ ಕಡಿಮೆಯಾಗುತ್ತದೆ.

ಚಳಿಗಾಲ

ಚಳಿಗಾಲವು ಕೂಚಿಪುಡಿಯಲ್ಲಿ ಸ್ವಲ್ಪ ಪ್ರಶಾಂತವಾಗಿರುತ್ತದೆ. ಇಲ್ಲಿನ ಚಳಿಗಾಲದ ತಾಪಮಾನ 17 ಡಿ. ಸೆ ಗಿಂತ ಕಡಿಮೆಗೊಳ್ಳುವುದಿಲ್ಲ. ಆದ್ದರಿಂದ ವಾತಾವರಣವು ಸ್ವಲ್ಪ ತಂಪಾಗಿರುತ್ತದೆ.  ನವೆಂಬರ್ ಡಿಸೆಂಬರ್ ಹಾಗೂ ಜನೆವರಿ ತಿಂಗಳುಗಳು ಕೂಚಿಪುಡಿಯ ಚಳಿಗಾಲದ ತಿಂಗಳುಗಳು. ಈ ಸಮಯದಲ್ಲಿ ಹೆಚ್ಚೇನೂ ಚಳಿಯಿಲ್ಲದಿದ್ದರೂ ರಾತ್ರಿ ತಾಪಮಾನವು ಕೊಂಚ ಕಡಿಮೆಯಾಗಬಹುದು. ಆದ್ದರಿಂದ ಅಗತ್ಯವೆನಿಸಿದರೆ ಉಣ್ಣೆಯ ಬಟ್ಟೆಗಳನ್ನು ಇಲ್ಲಿ ಧರಿಸುವುದು ಉತ್ತಮ.