ಕೂಚಿಪುಡಿ ಗ್ರಾಮದಲ್ಲಿ ವಿಮಾನ ನಿಲ್ದಾಣವಿಲ್ಲ. ಆದರೆ ಹತ್ತಿರದಲ್ಲಿ ವಿಜಯವಾಡದಲ್ಲಿ ವಿಮಾನ ಸೌಲಭ್ಯವಿದೆ. ವಿಜಯವಾಡಾ ನಗರವು ದೇಶೀಯ ವಿಮಾನ ನಿಲ್ದಾಣವನ್ನು ಹೊಂದಿದ್ದು, ಮುಂಬೈ, ಹೈದ್ರಾಬಾದ್, ದೆಹಲಿ ಹಾಗೂ ಕೋಲ್ಕತ್ತಾಗಳಂತಹ ಪ್ರಮುಖ ನಗರಗಳಿಂದ ಇಲ್ಲಿಗೆ ವಿಮಾನ ಯಾನದ ಸಂಪರ್ಕವಿದೆ. ಕೂಚಿಪುಡಿ ಗ್ರಾಮಕ್ಕೆ ಹೋಗಲು ಇಲ್ಲಿಂದ ಟ್ಯಾಕ್ಸಿಯನ್ನು ಕೊಂಡೊಯ್ಯಬಹುದು. ಅಲ್ಲದೆ ಪ್ರವಾಸಿಗರಿಗೆ ವಿಜಯವಾಡದ ಮುಖ್ಯ ಬಸ್ ನಿಲ್ದಾಣದಿಂದ ಕೂಚಿಪುಡಿ ಗ್ರಾಮಕ್ಕೆ ಬಸ್ ಸೌಕರ್ಯಗಳೂ ಕೂಡಾ ಲಭ್ಯ.