ಕೂಚಿಪುಡಿ ಗ್ರಾಮದಲ್ಲಿ ರೈಲ್ವೆ ನಿಲ್ದಾಣ ಅಥವಾ ವಿಮಾನ ನಿಲ್ದಾಣಗಳಿಲ್ಲದಿದ್ದರೂ ಸಹ ರಸ್ತೆ ಮಾರ್ಗದಲ್ಲಿ ಅತ್ಯಂತ ಸುಲಭದಲ್ಲಿ ತಲುಪಬಹುದಾಗಿದೆ. ಕೂಚಿಪುಡಿ ಗ್ರಾಮದಿಂದ ಸುತ್ತಲಿನ ಹತ್ತಿರದ ಪಟ್ಟಣಗಳಿಗೆ ತಲುಪಲು ಸರ್ಕಾರಿ ಬಸ್ ಸೇವೆಗಳ ಜೊತೆಗೆ ಖಾಸಗಿ ಬಸ್ ಸೇವೆಗಳೂ ಲಭ್ಯ. ಅಲ್ಲದೇ ಪ್ರವಾಸಿಗರ ಪ್ರಯಾಣವನ್ನು ಉತ್ತಮಗೊಳಿಸುವುದಕ್ಕಾಗಿ ಡಿಲೆಕ್ಸ್ ಹಾಗೂ ವೋಲ್ವೊ ಬಸ್ ಗಳು ಕೂಡಾ ಇವೆ.