ನವೆಂಬರಿನಿಂದ ಫೆಬ್ರುವರಿಯ ಅವಧಿ ಅಂದರೆ ಚಳಿಗಾಲವು ಕೊಪ್ಪಳಕ್ಕೆ ಭೇಟಿ ನೀಡಲು ಸೂಕ್ತವಾಗಿದೆ.
ಏಪ್ರಿಲ್‌ನಿಂದ ಜೂನ್‌ನ ಅವಧಿಯಲ್ಲಿ ಬೇಸಿಗೆಕಾಲವಿದ್ದು ಈ ಸಂದರ್ಭದಲ್ಲಿ ಉಷ್ಣಾಂಶ ವಿಪರೀತವಿರುತ್ತದೆ. ಸರಾಸರಿ ಉಷ್ಣಾಂಶವು 32℃ ನಿಂದ 39℃ ಮಧ್ಯೆ ಇರುತ್ತದೆ.
ಮಳೆಗಾಲವು ಜುಲೈನಿಂದ ಅಕ್ಟೋಬರಿನ ಅವಧಿಯದ್ದಾಗಿದ್ದು ಈ ಸಂದರ್ಭದಲ್ಲಿ ಅತಿಯಾದ ಮಳೆಯಾಗುವುದರಿಂದ ಉಷ್ಣಾಂಶ ಕಡಿಮೆ ಇರುತ್ತದೆ.
ನವೆಂಬರಿನಿಂದ ಫೆಬ್ರುವರಿಯ ಅವಧಿ ಚಳಿಗಾಲದ ಸಮಯ. ಈ ಅವಧಿಯಲ್ಲಿ 20° C ನಿಂದ 29° C ಉಷ್ಣಾಂಶವಿರುತ್ತದೆ. ಇದರಿಂದಾಗಿ ಈ ಅವಧಿಯು ಪ್ರವಾಸಕ್ಕೆ ಅನುಕೂಲವಾದ ಅವಧಿ ಎಂದು ಪರಿಗಣಿಸಲ್ಪಟ್ಟಿದೆ.