Search
  • Follow NativePlanet
Share
ಮುಖಪುಟ » ಸ್ಥಳಗಳು » ಕೌಸಾನಿ » ಹವಾಮಾನ

ಕೌಸಾನಿ ಹವಾಮಾನ

ಈ ಸುಂದರ ತಾಣಕ್ಕೆ ಭೇಟಿ ನೀಡಲು ಸೂಕ್ತ ಸಮಯ ಏಪ್ರಿಲ್ ಮತ್ತು ಜೂನ್ ತಿಂಗಳ ನಡುವಿನ ಅವಧಿಯಾಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ) : ಕೌಸಾನಿ ಪ್ರದೇಶದಲ್ಲಿ, ಬೇಸಿಗೆ ಋತುವು ಮಾರ್ಚ್ ತಿಂಗಳಲ್ಲಿ ಆರಂಭವಾಗುತ್ತದೆ ಮತ್ತು ಮೇ ತನಕ ಮುಂದುವರಿಯುತ್ತದೆ. ಈ ಸಮಯದಲ್ಲಿ ಹವಾಮಾನ ತುಂಬಾ ಆಹ್ಲಾದಕರ ಮತ್ತು ಆರಾಮದಾಯಕವಾಗಿರುತ್ತದೆ. ಈ ಸಮಯದಲ್ಲಿ ಕೌಸಾನಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ, 25 ಡಿ.ಸೆ ಮತ್ತು 11 ಡಿ. ಸೆ ನಷ್ಟು ದಾಖಲಾಗುತ್ತದೆ. ದೊಡ್ಡ ಪ್ರಮಾಣದಲ್ಲಿ  ಪ್ರವಾಸಿಗರು ಬೇಸಿಗೆ ಕಾಲದಲ್ಲಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಮಳೆಗಾಲ

(ಜೂನ್ ನಿಂದ ಅಗಸ್ಟ್) : ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳಿನವರೆಗೆ ಕೌಸಾನಿಯಲ್ಲಿ ಮಳೆಗಾಲ. ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಸಾಧಾರಣ ಮಳೆಯಾಗುತ್ತದೆ. ಆದರೆ, ರಸ್ತೆಗಳು ಈ ಕಾಲದಲ್ಲಿ ತುಂಬಾ ಜಾರುತ್ತವೆ. ಆದ್ದರಿಂದ, ಇದು ಪ್ರವಾಸಕ್ಕೆ ಉತ್ತಮ ಸಮಯ ಅಲ್ಲ.

ಚಳಿಗಾಲ

(ಅಕ್ಟೋಬರ್ ನಿಂದ ಫೆಬ್ರವರಿ) : ಕೌಸಾನಿ ಪ್ರದೇಶದಲ್ಲಿ ಚಳಿಗಾಲದ ಋತುವು ಅಕ್ಟೋಬರ್ ತಿಂಗಳಿನಲ್ಲಿ ಆರಂಭಗೊಂಡು ಫೆಬ್ರವರಿ ತನಕ ಮುಂದುವರಿಯುತ್ತದೆ. ಈ ಪ್ರದೇಶದಲ್ಲಿ ಚಳಿಗಾಲದಲ್ಲಿ ದಾಖಲಾಗುವ ಗರಿಷ್ಠ ಉಷ್ಣಾಂಶ 15 ಡಿ. ಸೆ ಮತ್ತು ಕನಿಷ್ಠ ಉಷ್ಣಾಂಶ 2 ಡಿ. ಸೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಈ ಸ್ಥಳದಲ್ಲಿ ಭಾರಿ ಪ್ರಮಾಣದ ಹಿಮಪಾತಗಳಾಗುತ್ತವೆ.