ಒವೇರಾ ರಾಷ್ಟ್ರೀಯ ಉದ್ಯಾನವು ಒವೇರಾ-ಅರು ಬಯೋಸ್ಫೀಯರ್ ರಿಸರ್ವ್ ಅಂತಲೂ ಕರೆಸಿಕೊಳ್ಳುತ್ತದೆ. ಶ್ರೀನಗರದಿಂದ ಇದು 76 ಕಿ.ಮೀ. ದೂರದಲ್ಲಿದೆ. ಇಲ್ಲಿ ಅಪಾರ ಸಂಖ್ಯೆಯಲ್ಲಿ ವನ್ಯಜೀವಿಗಳು ವಾಸವಾಗಿವೆ. ಉದಾಹರಣೆಗೆ ಮುಸ್ಕ್ ಜಿಂಕೆ, ಹಂಗುಲಾ, ಕಂದು ಕರಡಿ, ಕೋಕ್ಲಾ, ಚಿರತೆ, ಹಿಮ ಕುಕ್‌ಗಳು ಕಂಡು ಬರುತ್ತವೆ. ಇದು ಸಮುದ್ರ ಮಟ್ಟದಿಂದ 3000 ಮೀಟರ್‌ನಿಂದ 5425 ಮೀಟರ್‌ನಷ್ಟು ಎತ್ತರದಲ್ಲಿದೆ. ಈ ಉದ್ಯಾನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಇಲ್ಲಿ ಅಧಿಕೃತವಾಗಿ ನೊಂದಾಯಿಸಲಾದ 13 ಜಾತಿಯ ಪ್ರಾಣಿಗಳು, 80 ವಿಧದ ಪಕ್ಷಿಗಳು ಕಂಡುಬರುತ್ತವೆ. ವಿಭಿನ್ನ ಬಗೆಯ ಜೀವ ಜಂತುಗಳು ಇಲ್ಲಿ ನೆಲೆಸಿವೆ. ಅಲ್ಲದೇ, ವನ್ಯಜೀವಿ ವೀಕ್ಷಣೆಗೆ ವಿಶ್ವದೆಲ್ಲೆಡೆಯಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ದಟ್ಟ ಕಾಡು ಇಲ್ಲಿನ ಪ್ರಮುಖ ಆಕರ್ಷಣೆ. ಪೈನ್, ದೇವದಾರ್, ಪಿರ್ ಮರಗಳು ಪ್ರದೇಶದ ಸುತ್ತಲಿನ ಸೌಂದರ್ಯವನ್ನು ಸಮೃದ್ಧಗೊಳಿಸಿವೆ.
ಈ ಭಾಗದಲ್ಲಿ ಅಪಾರ ಸಂಖ್ಯೆಯ ಸಸ್ಯಗಳೂ ಕೂಡ ಕಂಡುಬರುತ್ತವೆ. ಬೇರೆಡೆ ಕಾಣಸಿಗದ ಅಪರೂಪದ ಸಸ್ಯಗಳು ಇಲ್ಲಿ ಗೋಚರಿಸುತ್ತವೆ. ಉದ್ಯಾನದ ಮೇಲ್ಭಾಗದ ಭೇಟಿಗೆ ಮೇ ನಿಂದ ಆಗಸ್ಟ್ ನಡುವಿನ ಅವಧಿಯಲ್ಲಿ ಬರುವುದು ಸೂಕ್ತ. ಮಾರ್ಚ್ ತಿಂಗಳಿಂದ ಮೇ ನಡುವಿನ ಅವಧಿಯಲ್ಲಿ ಉದ್ಯಾನದ ಕೆಳ ಭಾಗದ ಭೇಟಿ ಉತ್ತಮ.


Click it and Unblock the Notifications