Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಶ್ಮೀರ » ಆಕರ್ಷಣೆಗಳು » ಖೀರ್‌ ಭವಾನಿ ದೇವಸ್ಥಾನ

ಖೀರ್‌ ಭವಾನಿ ದೇವಸ್ಥಾನ, ಕಾಶ್ಮೀರ

1

ಶ್ರೀನಗರದಿಂದ 27 ಕಿ.ಮೀ. ದೂರದಲ್ಲಿದೆ ಖೀರ್‌ ಭವಾನಿ ದೇವಾಲಯ. ಇದಿರುವುದು ತುಲಾಮುಲಾ ಎಂಬ ಹಳ್ಳಿಯಲ್ಲಿ. ಈ ಪ್ರದೇಶದಲ್ಲಿ ಚಿನಾರ್‌ ಮರಗಳು ಸಾಕಷ್ಟಿದ್ದು ಆಕರ್ಷಕ ತೊರೆಯೊಂದು ದೇವಾಲಯದ ಪಕ್ಕದಲ್ಲೇ ಹರಿದಿದೆ. ಇವು ದೇಗುಲದ ಆಕರ್ಷಣೆಯನ್ನು ಹೆಚ್ಚಿಸಿವೆ. ಇದನ್ನು ಮೂಲತಃ 1912 ರಲ್ಲಿ ಮಹಾರಾಜಾ ಪ್ರತಾಪ್‌ ಸಿಂಗ್‌ ನಿರ್ಮಿಸಿದ್ದರೂ ಕಾಲಾಂತರದಲ್ಲಿ ರಾಜಾ ಹರಿಸಿಂಗನು ದೇವಿಯ ಗೌರವಾರ್ಥವಾಗಿ ಮತ್ತೆ ಮರುನಿರ್ಮಾಣ ಮಾಡಿದನು.

ಈ ದೇವಾಲಯದಲ್ಲಿರುವ ಷಟ್ಕೋನಾಕೃತಿಯ ಚಿಲುಮೆ/ತೊರೆಯು ದೇವಿಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ. ನಂಬಿಕೆಗಳ ಪ್ರಕಾರ, ಹಿಂದು ದೇವರಾದ ರಾಮನು ತನ್ನ ಅಜ್ಞಾತವಾಸ ಅವಧಿಯಲ್ಲಿ ಪೂಜೆ-ಪುನಸ್ಕಾರಗಳನ್ನು ನೆರವೆರಿಸಲು ಈ ಸ್ಥಳವನ್ನು ಬಳಸಿಕೊಳ್ಳುತ್ತಿದ್ದ. ಅಜ್ಞಾತವಾಸದ ನಂತರ ವಾನರ ದೇವರಾದ ಹನುಮನಿಗೆ (ಪ್ರಸ್ತುತ ವಿಗ್ರಹವಿರುವ) ಶದಿಪೊರಾಗೆ ಇಲ್ಲಿನ ವಿಗ್ರಹವನ್ನು ಸ್ಥಳಾಂತರಿಸಲು ಹೇಳಲಾಯಿತು.

ಈ ದೇವಾಲಯಕ್ಕೆ ಖೀರ್‌ ಎಂಬ ಹೆಸರು ಕೂಡ ಜನಪ್ರಿಯ ಸಿಹಿ ಖಾದ್ಯ ಖೀರಿನಿಂದಾಗಿ ಬಂದಿದ್ದಾಗಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರು ದೇವಿಗೆ ಹಾಲನ್ನು ಒಪ್ಪಿಸುತ್ತಾರೆ. ಸ್ಥಳೀಯರ ನಂಬಿಕೆ ಪ್ರಕಾರ ಖೀರಿನ ಬಣ್ಣ ಸಾಮಾನ್ಯವಾಗಿ ಬೆಳ್ಳಗಿರುತ್ತದೆ. ಇದು ಕಪ್ಪು ಬಣ್ಣಕ್ಕೆ ತಿರುಗಿದರೆ ಅನಿರೀಕ್ಷಿತ ಆಘಾತ ಎದುರಾಗಲಿದೆ ಎಂದು ನಂಬುತ್ತಾರೆ.

ಮೇ ತಿಂಗಳ ಹುಣ್ಣಿಮೆ ಸಂದರ್ಭದಲ್ಲಿ 8 ದಿನ ಇಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ದೇವತೆಯು ಇಲ್ಲಿನ ನೀರಿನ ಬಣ್ಣವನ್ನು ಕೂಡ ಬದಲಿಸುತ್ತಾಳೆ ಎಂದು ಜನ ನಂಬಿದ್ದಾರೆ. ಜೇಷ್ಠ ಅಷ್ಟಮಿ ಹಾಗೂ ಶುಕ್ಲ ಪಕ್ಷ ಅಷ್ಟಮಿ ಆಚರಣೆ ಇಲ್ಲಿನ ಜನಪ್ರಿಯ ಆಚರಣೆ ದಿನಗಳು. ಅಪಾರ ಸಂಖ್ಯೆಯ ಭಕ್ತರು ಈ ಸಂದರ್ಭದಲ್ಲಿ ಈ ದೇವಾಲಯಕ್ಕೆ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed