ಗಗ್ಗಲ್ ವಿಮಾನ ನಿಲ್ದಾಣವು ಕಂಗ್ರಾದಿಂದ 13 ಕಿ.ಮೀ ದೂರದಲ್ಲಿದ್ದು, ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಜಮ್ಮು ವಿಮಾನ ನಿಲ್ದಾಣ ಮತ್ತು ಅಮೃತಸರದ ಶ್ರೀ ರಾಮ್ ಗುರು ರಾಮ್ ದಾಸ್‍ಜೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಸಹ ಕಂಗ್ರಾಗೆ ಸಮೀಪದಲ್ಲಿರುವ ಇನ್ನಿತರ ವಿಮಾನ ನಿಲ್ದಾಣಗಳಾಗಿವೆ. ಇವೆರಡು ಕಂಗ್ರಾದಿಂದ ಅನುಕ್ರಮವಾಗಿ 200 ಕಿ.ಮೀ ಮತ್ತು 208 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಚಂಡೀಗಢ್ ವಿಮಾನ ನಿಲ್ದಾಣದ ಮೂಲಕವು ಸಹ ಈ ನಗರಕ್ಕೆ ಆಗಮಿಸುತ್ತಿರುತ್ತಾರೆ. ಚಂಡೀಗಢ್ ಇಲ್ಲಿಂದ 255 ಕಿ.ಮೀ ದೂರದಲ್ಲಿದೆ. ಈ ಎಲ್ಲಾ ವಿಮಾನ ನಿಲ್ದಾಣಗಳು ದೆಹಲಿ, ಮುಂಬಯಿ ಮತ್ತು ಪುಣೆಗಳಂತಹ ಮಹಾನಗರಗಳೊಂದಿಗೆ ಉತ್ತಮ ವಿಮಾನ ಸಂಪರ್ಕವನ್ನು ಹೊಂದಿದೆ. ಅಲ್ಲದೆ ಈ ವಿಮಾನ ನಿಲ್ದಾಣಗಳಿಂದ ಕೈಗೆಟುಕುವ ದರದಲ್ಲಿ ಟ್ಯಾಕ್ಸಿಗಳು ದೊರೆಯುತ್ತವೆ.