ಕಂಚನ್ ಜುಂಗಾದಲ್ಲಿ ಹವಾಮಾನವು ವರ್ಷಪೂರ್ತಿ ಆಹ್ಲಾದಕರವಾಗಿರುತ್ತದೆ. ಹಾಗಾಗಿ ಈ ಸ್ಥಳಕ್ಕೆ ಯಾವಾಗ ಬೇಕಾದರು ಭೇಟಿ ನೀಡಬಹುದು. ಆದರೂ ಸಹ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡದಿರುವುದು ಉತ್ತಮ. ಏಕೆಂದರೆ ಭಾರೀ ಮಳೆಯು ಪ್ರವಾಸಿಗರಿಗೆ ತೊಡಕನ್ನುಂಟು ಮಾಡುವ ಸಾಧ್ಯತೆಯಿದೆ. ಇಲ್ಲಿನ ಬೇಸಿಗೆಗಳು ಆಪ್ಯಾಯಮಾನಕರವಾಗಿರುತ್ತದೆ. ಹಾಗಾಗಿ ಬೇಸಿಗೆ ಕಾಲವು ಕಂಚನ್ ಜುಂಗಾಗೆ ಭೇಟಿ ಕೊಡಲು ಅತ್ಯುತ್ತಮ ಕಾಲವಾಗಿರುತ್ತದೆ.
ಕಂಚನ್ ಜುಂಗಾದಲ್ಲಿ ಬೇಸಿಗೆಯು ಮಾರ್ಚ್ ನಿಂದ ಮೇವರೆಗೆ ಇರುತ್ತದೆ. ಈ ಅವಧಿಯಲ್ಲಿ ಉಷ್ಣಾಂಶವು 10°ಸೆಲ್ಶಿಯಸ್‍ನಿಂದ 28° ಸೆಲ್ಶಿಯಸ್‍ವರೆಗೆ ಇರುತ್ತದೆ. ಇಲ್ಲಿ ಮೇ ತಿಂಗಳಿನಲ್ಲಿ ಉಷ್ಣಾಂಶವು ಅತ್ಯಧಿಕವಾಗಿರುತ್ತದೆ. ಇಲ್ಲಿ ಬೇಸಿಗೆ ಕಾಲದಲ್ಲಿ ಬೇಟಿ ಕೊಡುವುದಿದ್ದರು ಸಹ ಚಳಿಗಾಲದ ಉಡುಪುಗಳನ್ನು ಕೊಂಡೊಯ್ಯುವುದು ಉತ್ತಮ.ಕಂಚನ್ ಜುಂಗಾಗೆ ಭೇಟಿಕೊಡಲು ಈ ಅವಧಿಯು ಅತ್ಯುತ್ತಮವಾಗಿರುತ್ತದೆ.
ಜೂನ್ ತಿಂಗಳ ಆರಂಭದಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳು ಕಂಚನ್ ಜುಂಗಾದಲ್ಲಿ ಮಳೆಯನ್ನು ತರುತ್ತವೆ. ಜೂನ್ ನಂತರ ಮಳೆಯು ಕಡಿಮೆಯಾಗುತ್ತದೆ. ಅಕ್ಟೋಬರ್ ತಿಂಗಳು ಇಲ್ಲಿ ಪ್ರವಾಸಿ ಋತು ಆರಂಭವಾಗುತ್ತದೆ.
ಡಿಸೆಂಬರ್ ನಿಂದ ಫೆಬ್ರವರಿಯವರೆಗೆ ಇಲ್ಲಿ ಚಳಿಗಾಲವಿರುತ್ತದೆ. ಈ ಅವಧಿಯಲ್ಲಿ ಉಷ್ಣಾಂಶವು ಮೈ ಮರಗುಟ್ಟುವ -5° ಸೆಲ್ಶಿಯಸ್‍ವರೆಗು ಕುಸಿಯುತ್ತದೆ. ಅಲ್ಲದೇ ಯಾವುದೇ ಕಾರಣಕ್ಕು ಗರಿಷ್ಠ ಉಷ್ಣಾಂಶವು 16° ಸೆಲ್ಶಿಯಸ್ ದಾಟುವುದಿಲ್ಲ.