Search
  • Follow NativePlanet
Share
ಮುಖಪುಟ » ಸ್ಥಳಗಳು » ಕನತಲ್ » ಹವಾಮಾನ

ಕನತಲ್ ಹವಾಮಾನ

ಕನತಾಲ್ ಗ್ರಾಮದಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ಉತ್ತಮವಾದ ತಾಪಮಾನವಿದ್ದು, ಪ್ರವಾಸಿಗರು ಯಾವಾಗ ಬೇಕಾದರೂ ಇಲ್ಲಿಗೆ ಭೇಟಿ ನೀಡಬಹುದು. ಆದಾಗ್ಯೂ ಮಳೆಗಾಲದಲ್ಲಿ ಇಲ್ಲಿ ಹೆಚ್ಚು ಮಳೆ ಇರುವುದರಿಂದ ಭೇಟಿ ನೀಡುವುದನ್ನು ತಡೆಯುವುದು ಒಳ್ಳೆಯದು.

ಬೇಸಿಗೆಗಾಲ

(ಏಪ್ರಿಲ್ ನಿಂದ ಜೂನ್): ಕನತಾಲ್ ಗ್ರಾಮದಲ್ಲಿ ಬೇಸಿಗೆ ಏಪ್ರಿಲ್ ತಿಂಗಳಿಂದ ಆರಂಭವಾಗಿ ಜೂನ್ ವರೆಗೂ ಮುಂದುವರೆಯುತ್ತದೆ. ಈ ಕಾಲದಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಹಾಗೂ ಕನಿಷ್ಠ 10 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಬೇಸಿಗೆಯಲ್ಲಿ ರಾತ್ರಿ ವೇಳೆಯಲ್ಲಿ ತಾಪಮಾನ ಕನಿಷ್ಠ ಡಿಗ್ರಿಗೆ ತಲುಪುವುದರಿಂದ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಬೆಚ್ಚನೆಯ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ. ಸೈಟ್ ಸೀಯಿಂಗೆ ಹೋಗಲು ಇಷ್ಟ ಪಡುವ ಪ್ರವಾಸಿಗರು ಬೇಸಿಗೆಯಲ್ಲಿ ಇಲ್ಲಿ ಭೇಟಿ ನೀಡುವುದು ಸೂಕ್ತ.

ಮಳೆಗಾಲ

(ಜುಲೈ ನಿಂದ ಆಗಸ್ಟ್): ಜುಲೈ ನಿಂದ ಆಗಸ್ಟ್ ತಿಂಗಳವರೆಗೂ ಇಲ್ಲಿ ಮಳೆಗಾಲ ಇರುತ್ತದೆ. ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಹೆಚ್ಚು ಮಳೆ ಕಂಡು ಬರುತ್ತದೆ.

ಚಳಿಗಾಲ

(ಅಕ್ಟೋಬರ್ ನಿಂದ ಫೆಬ್ರವರಿ): ಇಲ್ಲಿ ಚಳಿಗಾಲ ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಿ ಫೆಬ್ರವರಿವರೆಗೂ ಮುಂದುವರೆಯುತ್ತದೆ. ಈ ಕಾಲದಲ್ಲಿ ಕನಿಷ್ಠ ಹಾಗೂ ಗರಿಷ್ಠ ತಾಪಮಾನ ಕ್ರಮವಾಗಿ ಸುಮಾರು 5 ಡಿಗ್ರಿಯಿಂದ 18 ಡಿಗ್ರಿ ಸೆಲ್ಶಿಯಸ್ ವರೆಗೆ ಇರುತ್ತದೆ. ಡಿಸೆಂಬರ್, ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಹೆಚ್ಚಾಗಿ ಹಿಮ ಮಳೆ ಸುರಿಯುತ್ತದೆ. ಚಳಿಗಾಲದಲ್ಲಿ ಸ್ಕೀಯಿಂಗ್ ನಂತಹ ಸಾಹಸ ಕ್ರೀಡೆಗಳು ಹಚ್ಚು ಜನಪ್ರಿಯವಾಗಿವೆ.