ಜೆಪೋರ್ ವಾಯು ನಿಲ್ದಾಣವನ್ನು ಹೊಂದಿದ್ದು, ಪ್ರಸ್ತುತ ಅದು ಕಾರ್ಯ ನಿರ್ವಹಿಸುತ್ತಿಲ್ಲ. ಆದರೂ ಕೇವಲ ವಿ.ಐ.ಪಿ ಪ್ರಯಾಣಿಕರು ಮತ್ತು ಖಾಸಗಿ ವಿಮಾನಗಳಿಗೆ ಮಾತ್ರ ಇಲ್ಲಿ ಅವಕಾಶವಿದೆ. ವೈಜಾಗ್ ಅಥವಾ ವಿಶಾಖಾಪಟ್ಟಣಂ ಇಲ್ಲಿಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ. ಇದು 237 ಕಿ.ಮೀ ದೂರದಲ್ಲಿದೆ. ಇದಲ್ಲದೆ 507 ಕಿ.ಮೀ ದೂರದಲ್ಲಿರುವ ಭುವನೇಶ್ವರ ವಿಮಾನ ನಿಲ್ದಾಣ ಮತ್ತೊಂದು ಆಯ್ಕೆ. ಈ ನಿಲ್ದಾಣಗಳಿಂದ ಜೆಪೋರ್ ಗೆ ತೆರಳಲು ಟ್ಯಾಕ್ಸಿಗಳನ್ನು ಪಡೆಯಬಹುದಾಗಿದೆ.