ಹೇಮಕುಂಡಕ್ಕೆ ಭೇಟಿ ನೀಡಲಿಚ್ಛಿಸುವವರು ಜೂನ್ ನಿಂದ ಅಕ್ಟೋಬರ್ ತನಕದ ಸಮಯದಲ್ಲಿ ಭೇಟಿ ನೀಡುವುದು ಸೂಕ್ತವಾಗಿದೆ. ಈ ಸಮಯದಲ್ಲಿ ಇಲ್ಲಿನ ತಾಪಮಾನ ಹೊರಗಡೆ ಸುತ್ತಾಡಿ ಇಲ್ಲಿನ ಸ್ಥಳಗಳನ್ನು ನೋಡಲು ಸೂಕ್ತವಾಗಿದೆ ಮತ್ತು ಈ ಅವಧಿಯಲ್ಲಷ್ಟೇ ನಂದಾದೇವಿ ಜೀವವೈವಿಧ್ಯ ಮೀಸಲು ತಾಣವನ್ನು ನೋಡಲು ಸಾಧ್ಯ.
(ಜೂನ್ ನಿಂದ ಅಕ್ಟೋಬರ್) : ಜೂನ್ ನಲ್ಲಿ ಆರಂಭವಾಗುವ ಬೇಸಿಗೆ ಕಾಲ ಅಕ್ಟೋಬರ್ ತನಕ ಮುಂದುವರಿಯುತ್ತದೆ. ಈ ಅವಧಿಯಲ್ಲಿ ತಾಪಮಾನ ಗರಿಷ್ಠ 17 ಡಿಗ್ರಿ ಸೆಲ್ಶಿಯಸ್ ತಲುಪುತ್ತದೆ ಹಾಗೂ ಇದು ಪ್ರವಾಸಕ್ಕೆ ಸೂಕ್ತವಾದ ಸಮಯವಾಗಿದೆ.
(ನವೆಂಬರ್ ನಿಂದ ಮೇ) : ಇಲ್ಲಿ ನವೆಂಬರ್ ತಿಂಗಳು ಚಳಿಗಾಲದ ಆರಂಭವಾಗಿದೆ. ಈ ಅವಧಿಯಲ್ಲಿ ಇಲ್ಲಿ ಭಾರೀ ಪ್ರಮಾಣದ ಹಿಮಪಾತವಾಗುತ್ತದೆ. ಈ ಅವಧಿಯಲ್ಲಿ ರಸ್ತೆಗಳು ಮುಚ್ಚಿ ಹೋಗುವ ಕಾರಣ ಹೇಮಕುಂಡ ಸಾಹಿಬ್ ಗೆ ಭೇಟಿ ನೀಡುವುದು ಸಾಧ್ಯವಿಲ್ಲ. ಈ ಅವಧಿಯಲ್ಲಿ ತಾಪಮಾನ 7 ಡಿಗ್ರಿ ಸೆಲ್ಶಿಯಸ್ ತನಕ ದಾಖಲಾಗುತ್ತದೆ.