Search
  • Follow NativePlanet
Share
» »ಗೋ ಏರ್‌ ಆಫರ್; ಬರೀ 1099 ರೂ. ಟಿಕೇಟ್‌ನಲ್ಲಿ ಎಲ್ಲೆಲ್ಲಾ ಪ್ರಯಾಣಿಸಬಹುದು

ಗೋ ಏರ್‌ ಆಫರ್; ಬರೀ 1099 ರೂ. ಟಿಕೇಟ್‌ನಲ್ಲಿ ಎಲ್ಲೆಲ್ಲಾ ಪ್ರಯಾಣಿಸಬಹುದು

ವಿಮಾನದಲ್ಲಿ ಓಡಾಡೋದೆಂದರೆ ಒಂದು ಕಾಲದಲ್ಲಿ ಬಹಳ ದುಬಾರಿಯಾಗಿತ್ತು. ಆದರೆ ಈಗ ವಿಮಾನ ಯಾನವು ಬಹಳ ಅಗ್ಗವಾಗಿದೆ. ಯಾರು ಬೇಕಾದರೂ ವಿಮಾನದಲ್ಲಿ ಓಡಾಡಬಹುದು. ಜನ ಸಾಮಾನ್ಯರಿಗೆ ವಿಮಾನದಲ್ಲಿ ಪ್ರಯಾಣಿಸಲು ಅನುಕೂಲಕರವಾಗುವಂತಹ ಆಫರ್‌ಗಳನ್ನು ವಿಮಾನ ಕಂಪನಿಗಳು ನೀಡುತ್ತಿವೆ.

ಮುಂಚಿತವಾಗಿ ಬುಕ್ ಮಾಡಿ

ಮುಂಚಿತವಾಗಿ ಬುಕ್ ಮಾಡಿ

ಭಾರತದ ಪ್ರತಿಯೊಂದು ವಿಮಾನ ಕಂಪನಿಯು ಒಂದೊಂದು ಆಫರ್‌ನ್ನು ನೀಡುತ್ತಿದೆ. ವಿಮಾನದಲ್ಲಿ ಪ್ರಯಾಣಿಸಬೇಕು, ದೂರದ ರಾಜ್ಯಗಳಿಗೆ ಪ್ರಯಾಣಿಸಬೇಕೆಂದು ಇಚ್ಛೆ ಇರುವವರು ವಿಮಾನದಲ್ಲಿ ಯಾವಾಗೆಲ್ಲಾ ಆಫರ್ ಬರುತ್ತದೆಯೋ ಆವಾಗ ಬುಕ್ ಮಾಡಿ ಇಡುವುದು ಒಳ್ಳೆಯದು. ಮತ್ತೆ ಇನ್ಯಾವಾಗಲೋ ನಮಗೆ ಬೇಕೆಂದಾಗ ಈ ಆಫರ್ ಸಿಗೋದಿಲ್ಲ. ಹಾಗಾಗಿ ಸಿಕ್ಕಿದ ಆಫರ್‌ನ್ನು ಮಿಸ್ ಮಾಡದೇ ಮುಂಚಿತವಾಗಿ ಬುಕ್ ಮಾಡಿ ಇಡೋದು ಒಳ್ಳೆಯದು.

ಲಾಲ್‌ಬಾಗ್‌ ಪ್ಲವರ್‌ ಶೋ: ಡೊಡ್ಡವರಿಗೆಷ್ಟು, ಮಕ್ಕಳಿಗೆಷ್ಟು ಟಿಕೇಟ್? ಲಾಲ್‌ಬಾಗ್‌ ಪ್ಲವರ್‌ ಶೋ: ಡೊಡ್ಡವರಿಗೆಷ್ಟು, ಮಕ್ಕಳಿಗೆಷ್ಟು ಟಿಕೇಟ್?

1099ರ ಆಫರ್

1099ರ ಆಫರ್

ಇದೀಗ ಗೋ ಏರ್ ಕಂಪೆನಿಯು ಡೊಮೆಸ್ಟಿಕ್ ವಿಮಾನಗಳಲ್ಲಿ 1099ರ ಆಫರ್ ನೀಡಿದೆ. ಈ ಆಫರ್ 10 ಲಕ್ಷ ಸೀಟ್‌ಗಳ ಮೇಲೆ ಇದೆ. ಗೋ ಏರ್‌ ನಿಂದ ಗೋ ಗ್ರೇಟ್ ಫೆಸ್ಟಿವಲ್ ಸೇಲ್ ನಡೆಯುತ್ತಿದೆ. ಈ ಆಫರ್‌ ಆಗಸ್ಟ್‌ 4ರಿಂದಲೇ ಪ್ರಾರಂಭವಾಗಿದ್ದು, 9 ಆಗಸ್ಟ್ ವರೆಗೆ ಇರುತ್ತದೆ.

ಅಗ್ಗದ ಟಿಕೇಟ್ ಜೊತೆ ಕ್ಯಾಶ್‌ಬ್ಯಾಕ್

ಅಗ್ಗದ ಟಿಕೇಟ್ ಜೊತೆ ಕ್ಯಾಶ್‌ಬ್ಯಾಕ್

ಗೋ ಏರ್‌ನ ಗೋ ಗ್ರೇಟ್ ಫೆಸ್ಟಿವಲ್‌ ಸೇಲ್‌ನಲ್ಲಿ ನೀವು 31 ಡಿಸೆಂಬರ್‌ ವರೆಗಿನ ಟಿಕೇಟ್ ಬುಕ್ ಮಾಡಬಹುದು. ಒಂದು ವೇಳೆ ನೀವು ಪೇಟಿಎಂ ನಿಂದ ಟಿಕೇಟ್ ಬುಕ್ ಮಾಡುತ್ತಿದ್ದೀರೆಂದಾದರೆ 5 ಶೇ ಕ್ಯಾಶ್‌ಬ್ಯಾಕ್‌ ಕೂಡಾ ಸಿಗುತ್ತದೆ.

ಕಾಶಿ ವಿಶ್ವನಾಥನಲ್ಲಿಗೆ ಫಸ್ಟ್‌ ಟೈಮ್ ಹೋಗುವವರು ಇದನ್ನು ನೆನಪಿಟ್ಟುಕೊಳ್ಳಿ ಕಾಶಿ ವಿಶ್ವನಾಥನಲ್ಲಿಗೆ ಫಸ್ಟ್‌ ಟೈಮ್ ಹೋಗುವವರು ಇದನ್ನು ನೆನಪಿಟ್ಟುಕೊಳ್ಳಿ

ಇತರ ಆಫರ್‌ಗಳು

ಇತರ ಆಫರ್‌ಗಳು

ಪೇಟಿಎಂ ನಲ್ಲಿ ಕ್ಯಾಶ್‌ಬ್ಯಾಕ್‌ನ್ನು ಹೊರತುಪಡಿಸಿ ಗೋ ಏರ್‌ ಇತರ ವೆಬ್‌ಸೈಟ್‌ನಲ್ಲೂ ಬುಕಿಂಗ್ ಮಾಡಬಹುದು. ಜೂಮ್‌ ಕಾರ್‌ ವೆಬ್‌ಸೈಟ್, ಟ್ರಿಬೋ ವೆಬ್‌ಸೈಟ್ ಹೊಟೇಲ್ ಬುಕ್ಕಿಂಗ್‌ ಮಾಡೋದರಿಂದ ಡಿಸ್ಕೌಂಟ್ ಸಿಗುತ್ತದೆ. ಮಿಂತ್ರಾ ಆಪ್‌ನಲ್ಲಿ 2500 ರೂ. ಗಿಂತಲೂ ಅಧಿಕ ಶಾಪಿಂಗ್ ಮಾಡೋದರಿಂದ 750 ರೂ. ಡಿಸ್ಕೌಂಟ್ ಸಿಗುತ್ತದೆ. ಈ ಆಫರ್ 31 ಅಕ್ಟೋಬರ್ 2018 ರವರೆಗೆ ಮಾತ್ರ ಇರುತ್ತದೆ.

ದೆಹಲಿ, ಕೊಲ್ಕತ್ತಾ, ಮುಂಬೈ

ದೆಹಲಿ, ಕೊಲ್ಕತ್ತಾ, ಮುಂಬೈ

ಗೋ ಏರ್ 23 ಸ್ಥಳಗಳಿಗೆ ಹಾರಾಡುತ್ತದೆ. ಇದು ದೆಹಲಿ, ಮುಂಬೈ, ಕೊಲ್ಕತ್ತಾ, ಚೆನ್ನೈ, ಪೋರ್ಟ್ ಬ್ಲೇಯರ್, ಗುವಾಗಟಿ, ಕೊಚ್ಚಿ, ಶ್ರೀನಗರ ಮುಂತಾದ ಪ್ರಮುಖ ನಗರಗಳಿಗಳಿಗೆ ಪ್ರಯಾಣಿಸಬಹುದು. ಈಗ ನೀವು ಕೆಲವೇ ಗಂಟೆಗಳಲ್ಲಿ ಅದೂ ಕೂಡಾ ಬಸ್‌, ರೈಲಿನ ಪ್ರಯಾಣ ದರಕ್ಕಿಂತ ಕಡಿಮೆ ದರದಲ್ಲಿ ನಿಮ್ಮ ಡೆಸ್ಟಿನೇಶನ್‌ನ್ನು ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X