Search
  • Follow NativePlanet
Share
ಮುಖಪುಟ » ಸ್ಥಳಗಳು » ಝೊಂಗು » ಆಕರ್ಷಣೆಗಳು
  • 01ಝೊಂಗುವಿನ ಏಲಕ್ಕಿ ತೋಟಗಳು

    ಝೊಂಗುವಿನ ಏಲಕ್ಕಿ ತೋಟಗಳು

    ಝೊಂಗು ಏಲಕ್ಕಿ ತೋಟಗಳಿಗೆ ಪ್ರಸಿದ್ಧವಾದದ್ದು. ಇದು ಅಷ್ಟಾಗಿ ಬೆಳಕಿಗೆ ಬರದೇ ಇರುವ ಪ್ರದೇಶವಾಗಿದ್ದು ನೋಡಲು ತುಂಬ ಸುಂದರವಾಗಿದೆ. ಇಲ್ಲಿ ಕಣ್ಣು ಹಾಯಿಸುವಷ್ಟು ದೂರದವರೆಗೆ ಭತ್ತದ ಗದ್ದೆಗಳು ಮತ್ತು ಏಲಕ್ಕಿ ತೋಟಗಳನ್ನು ಕಾಣಬಹುದು. ಇಲ್ಲಿನ ಹವಾಮಾನ ಏಲಕ್ಕಿ ಬೆಳೆಯಲು ಸೂಕ್ತವಾಗಿದೆ ಮತ್ತು ಇವುಗಳನ್ನು ಯಾವುದೇ ರೀತಿಯ...

    + ಹೆಚ್ಚಿಗೆ ಓದಿ
  • 02ಥೋಲುಂಗ ಮಠ

    ಥೋಲುಂಗ ಮಠ

    ಝೊಂಗು ಹತ್ತಿರದಲ್ಲಿರುವ ಪಾಸಿಂಗ್ದಾಂಗ್ನ ಸಮೀಪ ಥೋಲುಂಗ ಮಠವಿದೆ. ಇದು ಇಲ್ಲಿನ ಪುರಾತನ ಧಾರ್ಮಿಕ ಸ್ಥಳ. ಮೂರು ವರ್ಷಗಳಿಗೊಮ್ಮೆ ಥೋಲುಂಗ ಗೊಂಪದ ಥೋಲುಂಗ ಮಠದವರು ಕಂಸೆಲ್ ಎನ್ನುವ ಉತ್ಸವವನ್ನು ಆಯೋಜಿಸುತ್ತಾರೆ. ಈ ಉತ್ಸವದಲ್ಲಿ ಗೋಂಪಾದ ಸಂಗ್ರಹಗಳನ್ನು ಪ್ರದರ್ಶಿಸಲಾಗುತ್ತದೆ. ಈ ಮೂಲಕ ಸಂಗ್ರಹಕ್ಕೆ ಗಾಳಿ ಮತ್ತು ಬೆಳಕನ್ನು...

    + ಹೆಚ್ಚಿಗೆ ಓದಿ
  • 03ಹೀಗ್ಯಾಥಂಗ್

    ಹೀಗ್ಯಾಥಂಗ್

    ಹೀಗ್ಯಾಥಂಗ್ ಝೊಂಗುವಿನ ಕೆಳಭಾಗದಲ್ಲಿರುವ ಹಳ್ಳಿ. ಇದು ಉತ್ತರ ಸಿಕ್ಕಿಂ ಜಿಲ್ಲೆಯ ಮಂಗನ್ನ ಉಪವಿಭಾಗಕ್ಕೆ ಸೇರಿದ್ದು. ಇಲ್ಲಿ ಒಂದು ಸಣ್ಣ ಕೊಳವಿದೆ. ಇದನ್ನು ಲೆಪ್ಚಾ ಮಂದಿ ಇದನ್ನು ಪವಿತ್ರ ಕೊಳವೆಂದು ಪೂಜಿಸುತ್ತಾರೆ.

    + ಹೆಚ್ಚಿಗೆ ಓದಿ
  • 04ಲೆಪ್ಚಾಗಳ ಪಾರಂಪರಿಕ ವಸ್ತು ಸಂಗ್ರಹಾಲಯ

    ಲೆಪ್ಚಾಗಳ ಪಾರಂಪರಿಕ ವಸ್ತು ಸಂಗ್ರಹಾಲಯ

    ಈ ಸಂಗ್ರಹಾಲಯದ ಕಟ್ಟಡವು ಸಾಂಪ್ರದಾಯಿಕ ಲೆಪ್ಚಾ ಮನೆಗಳ ಶೈಲಿಯಲ್ಲಿದೆ. ಇದರ ಒಳಗೆ ತೀಸ್ತಾ ನದಿ ಮತ್ತು ರೊಂಗ್ ಚು ನದಿಗಳ ಸಂಗಮದಲ್ಲಿ ಒಂದು ಸಂಗ್ರಹಾಲಯವಿದೆ. ಸಂಗ್ರಹಾಲಯದ ಹೊರಗೆ ಹಲವು ಚಿಟ್ಟೆಗಳನ್ನು ಕಾಣಬಹುದಾಗಿದೆ.

    + ಹೆಚ್ಚಿಗೆ ಓದಿ
  • 05ಪೆಂಟೊಂಗ್

    ಪೆಂಟೊಂಗ್

    ಪೆಂಟೊಂಗ್ ಹಳ್ಳಿಯು ಝೊಂಗುವಿನ ಸಮೀಪದಲ್ಲಿದ್ದು ಉತ್ತರ ಸಿಕ್ಕಿಂನ ಮಂಗನ್ ಉಪವಿಭಾಗದಲ್ಲಿದೆ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದರೆ ಇದರ ಸುತ್ತಮುತ್ತಲಿರುವ ಹಿಮಾಚ್ಛಾದಿತ ಪರ್ವತಗಳ ನೋಟವನ್ನು ನೋಡಬಹುದು. ಇಲ್ಲಿಗೆ ಚಾರಣದ ಮೂಲಕ ಕೂಡ ತಲುಪಬಹುದು.

    + ಹೆಚ್ಚಿಗೆ ಓದಿ
  • 06ಜಲಪಾತಗಳು

    ಜಲಪಾತಗಳು

    ಝೊಂಗುವಿನ ಸುತ್ತಮುತ್ತ ಹಲವು ಜಲಪಾತಗಳಿವೆ. ಪ್ರತಿಯೊಂದು ಅದರದೇ ರೀತಿಯಲ್ಲಿ ಕಣ್ಮನ ಸೆಳೆಯುತ್ತದೆ. ಇವುಗಳಲ್ಲಿ ಲಿಂಗ್ಜ್ಯಾ ತುಂಬ ಸುಂದರವಾದ ಜಲಪಾತ. ಇಲ್ಲಿ ಸ್ನಾನ ಮಾಡಬಹುದು, ವಿರಮಿಸಬಹುದು ಮತ್ತು ಕೆಲವು ಸಮಯ ಕಳೆಯಬಹುದು.

    + ಹೆಚ್ಚಿಗೆ ಓದಿ
  • 07ಕ್ಯುಶಾಂಗ್

    ಕ್ಯುಶಾಂಗ್

    ಝೊಂಗುವಿನ ಅತ್ಯಂತ ಸುಂದರ ಪ್ರದೇಶಗಳಲ್ಲೊಂದು ಕ್ಯುಶಾಂಗ್. ಈ ಪ್ರದೇಶವು ಸುಂದರ ಪರ್ವತಗಳಿಂದ ಸುತ್ತುವರೆದಿದೆ ಮತ್ತು ಇಲ್ಲಿಂದ ಸ್ಪಟಿಕಶುದ್ಧ ನೀರಿನ ಕೊಳವಿದೆ. ಇಲ್ಲಿಗೆ ಸರಿಯಾದ ಸಮಯದಲ್ಲಿ ಭೇಟಿ ನೀಡಿದರೆ ಇಲ್ಲಿನ ಕಣಿವೆಗಳು ಹೂವಿನ ಹಾಸನ್ನು ಹೊದ್ದುಕೊಂಡಿರುವುದನ್ನು ಕಾಣಬಹುದು. ಪ್ರವಾಸಿಗರು ಇಲ್ಲಿ ಕೆಲವು ದಿನ...

    + ಹೆಚ್ಚಿಗೆ ಓದಿ
  • 08ಚಾರಣ

    ಚಾರಣ

    ಝೊಂಗುವಿನಲ್ಲಿ ಚಾರಣದ ಅನುಭವ ಅತ್ಯಂತ ಸುಂದರವಾದದ್ದು. ಏಕೆಂದರೆ ಇದು ಅಷ್ಟಾಗಿ ಬೆಳಕಿಗೆ ಬಾರದ ಪ್ರದೇಶವಾದ್ದರಿಂದ ಪ್ರವಾಸಿಗರು ತಮ್ಮ ಚಾರಣದಲ್ಲಿ ಹಲವು ಝರಿಗಳನ್ನು ಮತ್ತು ಅರಣ್ಯ ಪ್ರದೇಶವನ್ನು ಕಾಣಬಹುದು. ಇಲ್ಲಿ ಸಣ್ಣ ಮತ್ತು ದೊಡ್ಡ ಚಾರಣಗಳನ್ನು ಕೈಗೊಳ್ಳಬಹುದು.

    + ಹೆಚ್ಚಿಗೆ ಓದಿ
  • 09ಮೀನು ಶಿಕಾರಿ

    ಮೀನು ಶಿಕಾರಿ

    ನೀವು ಮೀನು ಶಿಕಾರಿಯನ್ನು ಇಷ್ಟಪಡುವಂತರಾಗಿದ್ದಾರೆ ಝೊಂಗುವಿನಲ್ಲಿ ಒಮ್ಮೆ ಮೀನು ಶಿಕಾರಿಯನ್ನು ಪ್ರಯತ್ನಿಸಿ. ಇಲ್ಲಿ ಸುಲಭಕ್ಕೆ ಮೀನು ಸಿಗುವುದಿಲ್ಲ. ಅಪಾರ ತಾಳ್ಮೆ ಬೇಕು. ಇಲ್ಲಿ ಮಶೀರ್ ಮತ್ತು ಟ್ರೌಟ್ ಮೀನುಗಳನ್ನು ಸಾಮಾನ್ಯವಾಗಿ ಕಾಣಬಹುದು.

    + ಹೆಚ್ಚಿಗೆ ಓದಿ
  • 10ಲಿಂಗ್ಥೇಮ್

    ಲಿಂಗ್ಥೇಮ್

    ಪಾಸಿಂಗ್ದಾಂಗ್ ಹಳ್ಳಿಯ ಸಮೀಪದಲ್ಲಿರುವ ಈ ಸ್ಥಳಕ್ಕೆ ಭೇಟಿ ನೀಡಲೇಬೇಕು. ಇದೊಂದು ಸಣ್ಣ ಚಾರಣದ ಮೂಲಕ ತಲುಪಬಹುದಾದ ಸ್ಥಳ. ಇದರ ಮೇಲೆ ಹತ್ತಿ ನಿಂತಾಗ ಝೊಂಗು ಕಣಿವೆಯ ಅದ್ಭುತ ನೋಟ ಮತ್ತು ಕಂಚನ ಜುಂಗಾದ ದೃಶ್ಯಗಳನ್ನು ಕಾಣಬಹುದು.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City