ಪಂತನಗರ್ ವಿಮಾನ ನಿಲ್ದಾಣವು ಧಾರ್ಚೂಲಾದಿಂದ 317 ಕಿ.ಮೀ ದೂರದಲ್ಲಿದ್ದು, ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಕೆಲವೊಂದು ದೈನಂದಿನ ವಿಮಾನಗಳು ಈ ವಿಮಾನ ನಿಲ್ದಾಣವನ್ನು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುತ್ತವೆ. ಭಾರತದ ಎಲ್ಲ ಪ್ರಮುಖ ನಗರಗಳೊಂದಿಗೆ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತಮ ಸಂಪರ್ಕವನ್ನು ಹೊಂದಿದೆ. ಟ್ಯಾಕ್ಸಿಗಳು ಮತ್ತು ಕ್ಯಾಬ್‍ಗಳು ಪಂತನಗರ್ ಇಂದ ಧಾರ್ಚೂಲಾ ತಲುಪಲು ನಿಮಗೆ ದೊರೆಯುತ್ತವೆ.