ರಿವರ್ ರಾಫ್ಟಿಂಗ್, ಕಾರ್ಬೆಟ್ ರಾಷ್ಟ್ರೀಯ ಉದ್ಯಾನ

ರಿವರ್ ರಾಫ್ಟಿಂಗ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಜರುಗುವ ಪ್ರಸಿದ್ಧ ಚಟುವಟಿಕೆಯಾಗಿದೆ. ನಯನ ಮನೋಹರವಾಗಿ ಹರಿಯುವ ಕೋಸಿ ನದಿಯು ರಾಫ್ಟಿಂಗ್ ಅಥವಾ ವೈಟ್ ವಾಟರ್ ರಾಫ್ಟಿಂಗ್‍ಗೆ ಅವಕಾಶವನ್ನು ಒದಗಿಸುತ್ತದೆ. ಈ ನದಿಯು ರಾಷ್ಟ್ರೀಯ ಉದ್ಯಾನವನದಲ್ಲಿ ಅತ್ಯಂತ ಸೂಕ್ತ, ಸಮರ್ಥ ಮತ್ತು ಸುರಕ್ಷಿತ ವಲಯವನ್ನು ರಾಫ್ಟಿಂಗ್‍ಗಾಗಿ ಒದಗಿಸುತ್ತದೆ. ನದಿಗೆ ಸಮೀಪದಲ್ಲಿರುವ ಹಲವಾರು ರೆಸಾರ್ಟುಗಳು ಕೈಗೆಟುಕುವ ದರದಲ್ಲಿ ರಾಫ್ಟಿಂಗ್‍ಗೆ ಅವಶ್ಯಕವಾದ ಸಾಮಗ್ರಿಗಳನ್ನು ಒದಗಿಸುತ್ತವೆ. ಈ ನದಿಯು ತನ್ನ ಸುತ್ತಲು ನಯನ ಮನೋಹರವಾದ ಪರ್ವತ ಶ್ರೇಣಿಗಳನ್ನು, ಶಿಖರಗಳನ್ನು ಹೊಂದಿದೆ. ಇದೆಲ್ಲದರ ಹೊರತಾಗಿ ಈ ನದಿಯ ದಂಡೆಯು ದಟ್ಟವಾದ ಕಾಡನ್ನು ಹೊಂದಿದೆ. ಅವುಗಳಲ್ಲಿ ಖಯಿರ್, ತೇಗ, ಸಾಲ್ ಮತ್ತು ರೋಸ್ ವುಡ್ ಮರಗಳನ್ನು ನಾವು ಕಾಣಬಹುದು.

ಹಲವಾರು ರೆಸಾರ್ಟುಗಳು ಕೋಸಿ ನದಿಯಲ್ಲಿ ಕೈಗೊಳ್ಳುವ ರಿವರ್ ರಾಫ್ಟಿಂಗ್‍ಗೆ ವಿವಿಧ ರೀತಿಯಲ್ಲಿ ಶುಲ್ಕವನ್ನು ವಿಧಿಸುತ್ತವೆ. ಸಾಮಾನ್ಯವಾಗಿ ಅವುಗಳ ದರವು ತಲಾ 2000 ರೂಪಾಯಿಗಳಾಗಿರುತ್ತವೆ. ಜುಲೈನಿಂದ ಸೆಪ್ಟೆಂಬರ್ ನಡುವಿನ ಅವಧಿಯು ಈ ರಾಷ್ಟ್ರೀಯ ಉದ್ಯಾನವನದಲ್ಲಿ ರಾಫ್ಟಿಂಗ್‍ನ್ನು ಆಸ್ವಾದಿಸಲು ಹೇಳಿ ಮಾಡಿಸಿದ ಸಮಯವಾಗಿದೆ. ಇದರೊಂದಿಗೆ ಇಲ್ಲಿ ರಿವರ್ ಕ್ರಾಸಿಂಗ್, ಶಿಲಾರೋಹಣ ಮತ್ತು ರಾಪ್ಪೆಲಿಂಗ್‍ನಂತಹ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳಲು ಇಲ್ಲಿನ ರೆಸಾರ್ಟುಗಳು ವ್ಯವಸ್ಥೆ ಮಾಡುತ್ತವೆ.

Please Wait while comments are loading...