Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಬೆಟ್ ರಾಷ್ಟ್ರೀಯ ಉದ್ಯಾನ » ಆಕರ್ಷಣೆಗಳು » ಕೋಸಿ ನದಿ

ಕೋಸಿ ನದಿ, ಕಾರ್ಬೆಟ್ ರಾಷ್ಟ್ರೀಯ ಉದ್ಯಾನ

1

ಕೋಸಿ ನದಿಯು ಭಾರತದ ಮತ್ತು ನೇಪಾಳಿನ ಒಂದು ಪ್ರಮುಖ ನದಿಯಾಗಿದೆ. ಇದರ ಮುಖಜ ಭೂಮಿಯು ಆಳವಾದ ಪ್ರಪಾತಗಳಿಂದ ಕೂಡಿದೆ. ಈ ಪ್ರಪಾತಗಳು ಈ ನದಿಯನ್ನು ಉತ್ತರದಲ್ಲಿ ಹರಿಯುವ ಯಾರ್ಲುಂಗ್ ತ್ಸಾಂಗ್ಪೊನಿಂದ ಬೇರ್ಪಡಿಸುತ್ತವೆ. ಕೋಸಿನದಿಯನ್ನು ಸಪ್ತಕೋಶಿ ಅಥವಾ ಕೋಶಿ ನದಿಯೆಂದೂ ಸಹ ಕರೆಯಲಾಗುತ್ತದೆ. ಇದು ಕಳೆದ 250 ವರ್ಷಗಳಲ್ಲಿ ಪಶ್ಚಿಮದಿಂದ ಪೂರ್ವಕ್ಕೆ 120 ಕಿ.ಮೀ ಸರಿದಿದೆ. ಋಗ್ವೇದದಲ್ಲಿ ಇದನ್ನು ಕೌಸಿಕ ಎಂದು ಉಲ್ಲೇಖಿಸಲಾಗಿದೆ. ಮಹಾಭಾರತದಲ್ಲಿ ಇದನ್ನು ಕೌಸಿಕಿ ಎಂದು ಕರೆಯಲಾಗಿದೆ. ನಂತರದ ಕಾಲದಲ್ಲಿ ಏಳು ನದಿಗಳನ್ನು ಒಟ್ಟಾರೆಯಾಗಿ ಸಪ್ತಕೋಶಿ ನದಿ ಎಂದು ಕರೆಯಲಾಯಿತು.

ಕೋಸಿ ನದಿಯು ಪ್ರವಾಸಿಗರಿಗೆ ಮೀನು ಹಿಡಿಯುವ ಅವಕಾಶವನ್ನು ಒದಗಿಸುತ್ತದೆ. ಅಕ್ಟೋಬರ್ ನಿಂದ ಡಿಸೆಂಬರ್ ಮತ್ತು ಫೆಬ್ರವರಿಯಿಂದ ಜೂನ್‍ವರೆಗಿನ ಅವಧಿಯು ಇಲ್ಲಿ ಮೀನು ಹಿಡಿಯಲು ಅತ್ಯುತ್ತಮ ಅವಧಿಯಾಗಿದೆ. ಹಲವಾರು ರೆಸಾರ್ಟುಗಳು ಕೋಸಿ ನದಿಯಲ್ಲಿ ಮೀನು ಹಿಡಿಯಲು ಬೇಕಾಗುವ ಅನುಮತಿಯನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಒದಗಿಸಿಕೊಡುತ್ತವೆ. ಮಳೆಗಾಲದಲ್ಲಿ ಈ ನದಿಯು ಮಳೆ ನೀರಿನಿಂದ ತುಂಬಿ ಹರಿಯುತ್ತದೆ ಮತ್ತು ದೊಡ್ಡ ಬಂಡೆಗಳು ಇದರ ಪ್ರವಾಹಕ್ಕೆ ಕೊಚ್ಚಿಕೊಂಡು ಬರುತ್ತಿರುತ್ತವೆ. ಹಾಗಾಗಿ ನದಿಯ ಹರಿವು ನಿರಂತರವಾಗಿರುವುದಿಲ್ಲ ಹಾಗು ಈ ನದಿಯ ಪಾತ್ರ ನಿರಂತರವಾಗಿ ಬದಲಾಗುತ್ತಿದೆ. ಇದರ ಜೊತೆಗೆ ಈ ನದಿಯು ಮಳೆಗಾಲದಲ್ಲಿ ಬಿಹಾರ್ ಮತ್ತು ಬಾಂಗ್ಲದೇಶದಲ್ಲಿ ಪ್ರವಾಹವನ್ನು ಸಹ ಉಂಟು ಮಾಡುತ್ತದೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu

Near by City