ಝಿರ್ನ ಎನ್ನುವುದು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ಒಂದು ಹುಲ್ಲುಗಾವಲಾಗಿದೆ. ಈ ಹುಲ್ಲುಗಾವಲು ಪಕ್ಷಿ ವೀಕ್ಷಕರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಪ್ರವಾಸಿಗರು ಇಲ್ಲಿ ಮಂಗಟ್ಟೆ ಹಕ್ಕಿ, ಕರಡಿ, ಆನೆ ಮತ್ತು ಹುಲಿಗಳು ಆಶ್ರಯವನ್ನು ಪಡೆದಿರುವುದನ್ನು ಕಾಣಬಹುದು. ಇದರೊಂದಿಗೆ ನೀಲ್ಗಾಯ್, ಸಾಂಬರ್ ಮತ್ತು ಕಾಡು ಹಂದಿಗಳನ್ನೂ ಕಾಣಬಹುದು.