ಧಿಕಲ ಎನ್ನುವುದು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಪಟ್ಲಿ ಡುನ್ ಕಣಿವೆಯಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಈ ಸ್ಥಳವು ಸುಮಾರು 100 ವರ್ಷ ಹಳೆಯದಾದ ಒಂದು ವಿಶ್ರಾಂತಿಗೃಹವನ್ನು ಹೊಂದಿದೆ. ಪ್ರವಾಸಿಗರು ಇಲ್ಲಿ ವಿಶ್ರಾಂತಿಯನ್ನು ಪಡೆಯಬಹುದು. ಪ್ರವಾಸಿಗರು ಇಲ್ಲಿ 'ಕಂಡ' ಪ್ರಪಾತದ ಹಿನ್ನಲೆಯಲ್ಲಿ ಕಂಗೊಳಿಸುವ ಸುಂದರ ಕಣಿವೆಯ ದೃಶ್ಯವನ್ನು ನೋಡಿ ಆನಂದಿಸಬಹುದು. ರಾಮ್‍ಗಂಗಾ ನದಿಯು ಈ ಕಣಿವೆಯಲ್ಲಿ ಹಲವಾರು ಕವಲುಗಳಾಗಿ ಹರಿಯುತ್ತದೆ.
ಧಿಕಲ ಪ್ರವಾಸಿ ಸಂಕೀರ್ಣದ ಹಿನ್ನಲೆಯಲ್ಲಿ ಧಿಕಲ ಚೌರ್ ಮತ್ತು ಫುಲೈ ಚೌರ್ ನಂತಹ ಹುಲ್ಲುಗಾವಲುಗಳು ಇವೆ. ಧಿಕಲ ಚೌರ್ ಈ ರಾಷ್ಟ್ರೀಯ ಉದ್ಯಾನವನದ ಅತಿ ದೊಡ್ಡ ಹುಲ್ಲುಗಾವಲಾಗಿದೆ. ಇದು ಹಲವಾರು ಕಾಲು ಹಾದಿಗಳನ್ನು ಹೊಂದಿದ್ದು, ಇದರ ಮೂಲಕ ಸಾಗುವ ಸಫಾರಿಯಲ್ಲಿ ಪ್ರವಾಸಿಗರಿಗೆ ಕಾಡಾನೆಗಳನ್ನು, ಚೀತಲ್, ಕಡವೆ ಮತ್ತು ವಿವಿಧ ಬಗೆಯ ಪಕ್ಷಿಗಳನ್ನು ನೋಡುವ ಅವಕಾಶವನ್ನು ಒದಗಿಸುತ್ತದೆ.


Click it and Unblock the Notifications