Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಬೆಟ್ ರಾಷ್ಟ್ರೀಯ ಉದ್ಯಾನ » ಆಕರ್ಷಣೆಗಳು » ಕಾರ್ಬೆಟ್ ಜಲಪಾತ

ಕಾರ್ಬೆಟ್ ಜಲಪಾತ, ಕಾರ್ಬೆಟ್ ರಾಷ್ಟ್ರೀಯ ಉದ್ಯಾನ

1

ಕಾರ್ಬೆಟ್ ಜಲಪಾತವು ಸುಮಾರು 60 ಅಡಿಯಿಂದ ಧುಮ್ಮಿಕ್ಕುವ ಜಲಪಾತವಾಗಿದೆ. ಇದು ರಾಮ್‍ನಗರದಿಂದ ಸುಮಾರು 25 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಸ್ಥಳವು ಪಕ್ಷಿ ವೀಕ್ಷಣೆಗೆ, ಶಿಬಿರಗಳನ್ನು ಹಾಕಲು ಮತ್ತು ವಿಹಾರಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿನ ಅರಣ್ಯ ಇಲಾಖೆಯು ವಿಹಾರಾರ್ಥಿಗಳಿಗೆ ಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸುತ್ತದೆ. ಈ ಪ್ರಾಂತ್ಯವು ರಾಮ್ ನಗರ್ ಅರಣ್ಯ ವಿಭಾಗದ ಅಡಿ ಬರುತ್ತದೆ. ಇದು ಕಾಲಾಧುಂಗಿಯಿಂದ ಕೇವಲ 4 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.

ದಟ್ಟವಾದ ಹಸಿರ ಕಾನನ, ಜಲಪಾತದ ಭೋರ್ಗರೆತ, ಹಕ್ಕಿಗಳ ಚಿಲಿಪಿಲಿ ಮತ್ತು ಪ್ರಶಾಂತವಾದ ವಾತಾವರಣ ಹಾಗು ಇಲ್ಲಿನ ಸೌಂದರ್ಯವು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಇಲ್ಲಿಗೆ ಪ್ರವೇಶಿಸಲು ಭಾರತೀಯರು 5 ರೂಪಾಯಿಯ ಪ್ರವೇಶ ದರವನ್ನು ನೀಡಬೇಕು. ವಿದೇಶಿಯರು 10 ರೂಪಾಯಿಯನ್ನು ನೀಡಿ ಈ ಜಲಪಾತವನ್ನು ನೋಡಬಹುದು. ಪ್ರವಾಸಿಗರು ಇಲ್ಲಿ ಛಾಯಾಚಿತ್ರವನ್ನು ತೆಗೆಯಲು ಯಾವುದೇ ಶುಲ್ಕವನ್ನು ನೀಡಬೇಕಿಲ್ಲ. ಅಲ್ಲದೆ ಅವರು ಈ ಜಲಪಾತದಲ್ಲಿ ಸ್ನಾನವನ್ನು ಸಹ ಮಾಡಬಹುದು. ಇದರ ಜೊತೆಗೆ ಪ್ರವಾಸಿಗರು ಸಮೀಪದಲ್ಲಿರುವ ನೇಚರ್ ವಾಕ್ ವಸ್ತು ಸಂಗ್ರಹಾಲಯಕ್ಕೆ ಸಹ ಭೇಟಿಕೊಡಬಹುದು.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun

Near by City